ಸಿಂಗಾಪುರದ ಆಸ್ಪತ್ರಗೆ ಶಾಸಕ ರವೀಂದ್ರ

M.P Ravindra admited in mount elizabeth hospital singapore

30-01-2018

ಬೆಂಗಳೂರು: ಹರಪನಹಳ್ಳಿ ಶಾಸಕ ಎಂ.ಪಿ ರವೀಂದ್ರ ಅವರ ಆರೋಗ್ಯ ಸ್ಥಿರವಾಗಿದ್ದು, ವಿಕ್ರಂ ಆಸ್ಪತ್ರೆಯ ವೈದ್ಯರು ಸಲಹೆ ನೀಡಿರುವ ಕಾರಣಕ್ಕೆ ಸಿಂಗಪುರ್ ನ ಮೌಂಟ್ ಎಲಿಜಬೆತ್ ಆಸ್ಪತ್ರೆಗೆ ತೆರಳಿದ್ದಾರೆ ಎಂದು ರವೀಂದ್ರ ಅವರ ರಾಜಕೀಯ ಕಾರ್ಯದರ್ಶಿ ಇರ್ಫಾನ್ ಮುದಗಲ್ ತಿಳಿಸಿದ್ದಾರೆ.

ರವೀಂದ್ರ ಅವರ ಆರೋಗ್ಯದ ಕುರಿತು ವದಂತಿಗಳಿಗೆ ಕಿವಿಗೊಟ್ಟು ಊಹಾಪೋಹದ ಸುದ್ದಿಗಳನ್ನು ಬಿತ್ತರಿಸಬೇಡಿ. ಶಾಸಕರು ಆರೋಗ್ಯವಾಗಿದ್ದಾರೆ. ಅವರಿಗೆ ವಿಶ್ರಾಂತಿಯ ಅವಶ್ಯಕತೆ ಇರುವುದಾಗಿ ಬೆಂಗಳೂರಿನ ವಿಕ್ರಂ ಆಸ್ಪತ್ರೆಯ ವೈದ್ಯರು ಸಲಹೆ ನೀಡಿರುವ ಕಾರಣಕ್ಕೆ ಸಿಂಗಪುರಿನ ಮೌಂಟ್ ಎಲಿಜಬೆತ್ ಆಸ್ಪತ್ರೆಗೆ ತೆರಳಿದ್ದಾರೆ. ಪಿತ್ತಜನಕಾಂಗದಲ್ಲಿ ಹರಳು ಕಾಣಿಕೊಂಡಿರುವ ಹೊರತಾಗಿ ಅವರ ಕಿಡ್ನಿ, ಲಿವರ್, ಹೃದಯದಂತಹ ದೇಹದ ಇತರೆ ಯಾವುದೇ ಅಂಗಾಂಗಗಳು ಹಾನಿಯಾಗಿಲ್ಲ ಮತ್ತು ಅವರ ಆರೋಗ್ಯ ಗಂಭೀರವಾಗಿಲ್ಲ ಎಂದು ವೈದ್ಯರು ದೃಢಿಕರಿಸಿದ್ದಾರೆ ಎಂದು ಮುದಗಲ್ ಮಾಹಿತಿ ನೀಡಿದ್ದಾರೆ.

ಶಾಸಕರ ಆರೋಗ್ಯದ ಕುರಿತು ಅಧಿಕೃತ ಮಾಹಿತಿ ನೀಡಬೇಕಿರುವುದು ಅವರ ಕುಟುಂಬ ವರ್ಗ ಮತ್ತು ಅವರ ಆಪ್ತರು. ಇವರನ್ನು ಬಿಟ್ಟು ಬೇರೆ ಅನಧಿಕೃತ ವ್ಯಕ್ತಿಗಳಿಂದ ಮಾಹಿತಿ ಪಡೆದು ಊಹಾಪೋಹದ ಸುದ್ದಿಗಳನ್ನು ಬಿತ್ತರಿಸಬೇಡಿ, ಶಾಸಕರು ಸಿಂಗಪುರದಿಂದ ಹಿಂದಿರುಗಿದ ಮೇಲೆ ನಿಮ್ಮೆಲ್ಲರಿಗೂ ಉತ್ತರಿಸಲಿದ್ದಾರೆ ಎಂದು ಪತ್ರಿಕಾ ಹೇಳಿಕೆ ಮೂಲಕ ಮನವಿ ಮಾಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

M.p.ravindra singapore ಊಹಾಪೋಹ ಶಾಸಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ