ಸಿದ್ದುಗೆ ದೇವೇಗೌಡರ ನೇರ ಪ್ರಶ್ನೆ

Deve gowda

30-01-2018

ರಾಮನಗರ: ನಮ್ಮದು ಸಣ್ಣ ಕುಟುಂಬ, ನಾನು ರೈತ ನ ಮಗ, ಹತ್ತಾರು ವರ್ಷಗಳಿಂದ ಹಲವು ಪೆಟ್ಟುಗಳನ್ನು ತಿಂದಿದ್ದೇನೆ, ದೇವೇಗೌಡ ಮುಗಿದೇ ಹೋದ ಎಂದ ಸಂದರ್ಭದಲ್ಲಿ ರೈತರು ನನ್ನ ಕೈ ಹಿಡಿದಿದ್ದಾರೆ. ಆದರೆ ನಿಮ್ಮಪ್ಪನ ಬಿಟ್ಟು ಹೊರಗಡೆ ಬಾ ನಿನ್ನ ಮುಖ್ಯಮಂತ್ರಿ ಮಾಡ್ತೀವಿ ಅಂತಾರೆ, ಇಲ್ಲಿನ ಮಹಾನುಭಾವ ಎಂದು ಶಾಸಕ ಬಾಲಕೃಷ್ಣ ವಿರುದ್ಧ ದೇವೇಗೌಡರು ಕಿಡಿಕಾರಿದ್ದಾರೆ.

ರಾಮನಗರದಲ್ಲಿಂದು ಮಾತನಾಡಿದ ಅವರು, ಈ ದೇಶದಲ್ಲಿ ಮತ್ತೊಬ್ಬ ದೇವೇಗೌಡ ಹುಟ್ಟಲು ಸಾಧ್ಯವಿಲ್ಲ, ಗೌಡ ಎಂದರೇ ಜಾತಿ ಅಲ್ಲ, ಊರಿನಲ್ಲಿ ಗೌಡರು ಇದ್ದಾರೆ, ಎಲ್ಲಾ ಜಾತಿಯಲ್ಲೂ ಗೌಡರು ಇದ್ದಾರೆ ಎಂದರು. ನಾನು ದ್ರೋಹ ಮಾಡಿದ್ದೀನಿ ಅಂತಾರೆ, ನಾನು ಯಾರಿಗೆ ದ್ರೋಹ ಮಾಡಿದ್ದೀನಿ, ನಾನು ಕುರುಬರನ್ನು ಹೊತ್ತು ಕೊಂಡು ಬೀದಿ ಬೀದಿಯಲ್ಲಿ ಮೆರವಣಿಗೆ ಮಾಡಿದ್ದೀನಿ, ನೇರವಾಗಿ ಸಿದ್ದರಾಮಯ್ಯನವರೇ ನಿಮ್ಮನ್ನ ಕೇಳ್ತೀನಿ, ಯಾರಿಗೆ ದ್ರೋಹ ಮಾಡಿದ್ದೀನಿ ಹೇಳಿ ಎಂದು ಪ್ರಶ್ನಿಸಿದ ಅವರು, ಕುರುಬರನ್ನು ತಲೆ ಮೇಲೆ ಕೂರಿಸಿಕೊಂಡಿದ್ದೀನಿ, ನಾನು ಯಾವ ಜಾತಿಗೂ ದ್ರೋಹ ಮಾಡಿಲ್ಲ ಎಂದು ಹೇಳಿದರು.

ಮಹಿಳೆಯರಿಗೆ ಮೀಸಲಾತಿ 33% ಮಾಡಿದ್ದು ಯಾರು, ನಾಲಿಗೆ ಇದ್ರೆ ಅದನ್ನು ಹೇಳಲಿ, ನಮ್ಮಂತೆ ಎಲ್ಲಾ ಜಾತಿಯವರು, ನಾನು ಯಾವ ಸಮಾಜಕ್ಕೆ ದ್ರೋಹ ಮಾಡಿದ್ದೀನಿ ಹೇಳಬೇಕು, ಒಬ್ಬ ಹಳ್ಳಿಯ ರೈತನ ಮಗ ನಾನು ಎಷ್ಟು ಮಾಡಿದ್ದೀನಿ, ನನಗೆ ಯಾಕೆ ರೀತಿ ಆಗ್ತಿದೆ ಎಂದು ದೇವರಲ್ಲಿ ಕೇಳ್ತಿದ್ದೇನೆ ಎಂಬುದಾಗಿ, ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಭಾವುಕರಾದರು.

ಇನ್ನು ಕಳೆದ ಚುನಾವಣೆಯಲ್ಲಿ ಕೂಟಗಲ್ ನಲ್ಲಿ ಭಾಷಣ ಮಾಡಿ ಕುಮಾರಸ್ವಾಮಿ ಅಳ್ತಾರೆ, ಬಾಲಕೃಷ್ಣ ಸೋತರೇ ನಾನು ಸೋತ ಹಾಗೆ ಅಂತಾ, ಆದರೆ ಈಗ ಅದೇ ಬಾಲಕೃಷ್ಣ ಹೇಳ್ತಾರೆ ನನ್ನ‌ ವಿರುದ್ಧ ಕುಮಾರಸ್ವಾಮಿ ಬೇಕಾದರೇ ಸ್ಪರ್ಧೆ ಮಾಡಲಿ, ನಾನು ಗೆಲ್ತೀನಿ ಅಂತಾರೆ, ಅವರದು ಪಾಪದ ಧನ ಬಲ ಅಥವಾ ಜನ ಬಲ ಅಂತಾ ತೀರ್ಮಾನ ಆಗಬೇಕು ಎಂದರು.


ಸಂಬಂಧಿತ ಟ್ಯಾಗ್ಗಳು

HD devegowda Balakrishana ದ್ರೋಹ ಜಾತಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


Hdd
  • Mohan
  • Besnes
karnataka da lion devegowdaji
  • shivakumar
  • polatical