‘ಓವೈಸಿಯೊಂದಿಗೆ ಯಾವುದೇ ಒಪ್ಪಂದವಿಲ್ಲ’

we have not made any agrements with owaisi-BSY

30-01-2018

ದಾವಣಗೆರೆ: ಓವೈಸಿ ಜೊತೆ ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಪ್ರತಿಕ್ರಿಯಿಸಿದ್ದು, ನಾವು ಯಾವುದೇ ಅಲ್ಪಸಂಖ್ಯಾತ ಸಂಘಟನೆಗಳ ಜೊತೆ ಒಳ ಒಪ್ಪಂದ-ಹೊರ ಒಪ್ಪಂದ ಮಾಡಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ದಾವಣಗೆರೆಯ ಜಗಳೂರು ತಾಲ್ಲೂಕಿನ ಅಣಜಿ ಗ್ರಾಮದಲ್ಲಿಂದು ಮಾತನಾಡಿದ ಅವರು, ಈ ಬಗ್ಗೆ ನಮ್ಮ ರಾಷ್ಟ್ರೀಯ ನಾಯಕರು ಸಹ ಸ್ಪಷ್ಟಪಡಿಸಿದ್ದಾರೆ, ನಾನು ಸ್ಪಷ್ಟಪಡಿಸುತ್ತಿದ್ದೇನೆ 224 ಕ್ಷೇತ್ರಗಳಲ್ಲೂ ನಮ್ಮ ಪಕ್ಷ ಸ್ಪರ್ಧಿಸುತ್ತದೆ, ಯಾರ ಜೊತೆಯು ಒಪ್ಪಂದವಿಲ್ಲ ಎಂದಿದ್ದಾರೆ.  ಇನ್ನು ಬಿಜೆಪಿ ನಾಯಕರಿಕೆ ಕೊಲೆ ಬೆದರಿಕೆ ಪತ್ರ ಹಿನ್ನೆಲೆ, ಈಶ್ವರಪ್ಪ ಹಾಗು ಸಿ.ಟಿ.ರವಿಗೆ ಕೊಲೆಬೆದರಿಕೆ ಬಗ್ಗೆ ನನಗೆ ಮಾಹಿತಿ ಇಲ್ಲ, ಈ ಬಗ್ಗೆ ಪರಿಶೀಲಿಸುತ್ತೆನೆ ಎಂದು ಹೇಳಿದ್ದಾರೆ.


ಸಂಬಂಧಿತ ಟ್ಯಾಗ್ಗಳು

yeddyurappa Eshwarappa ಕೊಲೆ ಬೆದರಿಕೆ ಓವೈಸಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ