ಆರ್.ಆಶೋಕ್ ಆರೋಪಕ್ಕೆ ರೆಡ್ಡಿ ಉತ್ತರ

Ramalinga Reddy reply to R.ashok allegation

30-01-2018

ಬೆಂಗಳೂರು: ಫೆಬ್ರವರಿ 4ರ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭ ಫ್ಲಾಪ್ ಮಾಡಲು ಕಾಂಗ್ರೆಸ್ ತಂತ್ರ ರೂಪಿಸಿದೆ ಎಂಬ ಆರ್.ಅಶೋಕ್ ಆರೋಪಕ್ಕೆ, ವಿಕಾಸಸೌಧದಲ್ಲಿ ಗೃಹ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿದ್ದು, ಅವರದು ಒಂದು ರಾಜಕೀಯ ಪಕ್ಷ , ನಮ್ಮದು ಒಂದು ರಾಜಕೀಯ ಪಕ್ಷ. ಫೆಬ್ರವರಿ 4ರಂದು ಪ್ರಧಾನಿ ಮೋದಿ ಬಿಜೆಪಿ ಕಾರ್ಯಕ್ರಮಕ್ಕೆ ಬರ್ತಿದ್ದಾರೆ, ಅದರ ಸಿದ್ಧತೆ ಅವರು ಮಾಡಿಕೊಳ್ಳಲಿ, ಅದನ್ನು ಬಿಟ್ಟು ರ‍್ಯಾಲಿ ದಿನ ಟ್ರಾಫಿಕ್ ಜಾಮ್ ಮಾಡಿಸ್ತಾರೆ, ಸಿಗ್ನಲ್ ಬಂದ್ ಮಾಡ್ತಾರೆ, ಬಸ್ ತಡೆಯುತ್ತಾರೆ ಅಂತ ಹೇಳೋದು ಸರಿಯಲ್ಲ, ಅಂತಹ ಸಣ್ಣ ಬುದ್ದಿ ನಮಗಿಲ್ಲ. ನಮಗೇನು ಮಾಡೋಕೆ ಬೇರೆ ಕೆಸಲ ಇಲ್ವಾ? ಗುಡುಗಿದ ಅವರು, ರ‍್ಯಾಲಿ ದಿನ ಜನ ಓಡಾಡೋಕೆ ಸುಲಭ ವ್ಯವಸ್ಥೆ ಬೇಕಾದರೆ ನಾವೇ ಮಾಡಿಸಿಕೊಡ್ತೀವಿ. ಅವರು ಸಮಾವೇಶಕ್ಕೆ 10 ಲಕ್ಷ ಜನ ಬೇಕಾದರೂ ಸೇರಿಸಲಿ, ನಮಗೇನೂ ಆಗಬೇಕಾದ್ದಿಲ್ಲ ಎಂದು ಉತ್ತರಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Ramalinga Reddy R.ashok ಸಿಗ್ನಲ್ ಗೃಹ ಸಚಿವ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ