ಸುದ್ದಿಗೋಷ್ಠಿಯಿಂದ ಅರ್ಧಕ್ಕೆ ಎದ್ದು ಹೋದ ಶಣೈ..!

Anupama shenoy walks out from press meet...!

30-01-2018

ಬಾಗಲಕೊಟೆ: ಶಾಸಕ ಎಚ್.ವೈ.ಮೇಟಿ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಾಗಲಕೋಟೆಯಲ್ಲಿ ಮಾಜಿ ಡಿವೈಎಸ್ಪಿ ಅನುಪಮಾ ಶಣೈ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು, ಈ ವೇಳೆ ಮಾಧ್ಯಮದವರ ಮತ್ತು ಅನುಪಮಾ ಶೆಣೈ ನಡುವೆ ವಾಗ್ವಾದವಾದ ಘಟನೆಯು ಜರುಗಿದೆ. ಪ್ರಕರಣದಲ್ಲಿ ನಾನು ಮಧ್ಯವರ್ತಿಯಾಗಿದ್ದು ನಿಜ ಎಂದ ಅನುಪಮಾ ಶಣೈ, ಪೇದೆ ಸುಭಾಷ್ ಮುಗಳಖೋಡ್ ಸಿಡಿಯೊಂದಿಗೆ ನನ್ನನ್ನು ಭೇಟಿಯಾಗಿದ್ದರು, ಆಗ ನಾನು ರಾಜಶೇಖರ ಮುಲಾಲಿ ನಂಬರ್ ಕೊಟ್ಟಿದ್ದೆ. ಆದರೆ ನಾನು ಸಿಡಿಯಲ್ಲಿ ಏನಿದೆ ಎಂದು ನೋಡಿಲ್ಲ ಎಂದು ಹೇಳಿದರು.

ಇನ್ನು ಸಂತ್ರಸ್ಥೆ ವಿಜಯಲಕ್ಷ್ಮಿ ಮತ್ತು ಶಾಸಕ ಮೇಟಿ ಜೊತೆ ಮಾಡಿಕೊಂಡ ಡೀಲ್ ವಿಚಾರದ ಕುರಿತು ಮಾಧ್ಯಮದವರ ಪ್ರಶ್ನೆಗೆ ಅನುಪಮಾ ಶೆಣೈ ಗಲಿಬಿಲಿಯಾಗಿದ್ದು, ಪ್ರಶ್ನಿಸಿದ್ದಕ್ಕೆ ಮಾಧ್ಯಮದವರ ಮೇಲೆಯೇ ಆರೋಪ ಮಾಡಿದ್ದಾರೆ. ಮಾಧ್ಯಮದವರು ಮೇಟಿಯವರ ಪರವಾಗಿದ್ದೀರಿ ಎಂದು ಸುದ್ದಿಗೋಷ್ಠಿಯಲ್ಲೇ ಆರೋಪಿಸಿದ್ದಾರೆ. ಇನ್ನು ಮಾಧ್ಯಮದವರ ಪ್ರಶ್ನೆಗಳ ಸುರಿಮಳೆ ಹೆಚ್ಚಾಗುತ್ತಿದ್ದಂತೆ ಸುದ್ದಿಗೋಷ್ಠಿ ಅರ್ಧಕ್ಕೆ ಬಿಟ್ಟು ಎದ್ದು ಹೋಗಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


Like supersuddi
  • Ramanath
  • Sr engineer, electrical maintenance