ಬಿಜೆಪಿ ಶಾಸಕರ ಕಚೇರಿಗೂ ಬೆದರಿಕೆ ಪತ್ರ...!

Threatining letter to BJP legislators office too

30-01-2018

ಚಿಕ್ಕಮಗಳೂರು: ಚಿಕ್ಕಮಗಳೂರು ಶಾಸಕ ಸಿ.ಟಿ.ರವಿಗೆ ಜೀವ ಬೇದರಿಕೆ ಪತ್ರ ಬಂದ ಬೆನ್ನಲ್ಲೇ, ಚಿಕ್ಕಮಗಳೂರಿನ ಬಸವನಹಳ್ಳಿಯಲ್ಲಿರುವ ಬಿಜೆಪಿ ಶಾಸಕರ ಕಚೇರಿಗೂ ಬೆದರಿಕೆ ಪತ್ರ ರವಾನೆಯಾಗಿರುವುದು ಬೆಳಕಿಗೆ ಬಂದಿದೆ. ಬೆಂಗಳೂರಿನ ‘ಅಲೆ ಹದೀಶ್ ಗ್ರೂಪ್ ಆಫ್ ಕರ್ನಾಟಕ’ ಎಂಬ ಹೆಸರಿನಲ್ಲಿ ರೌಡಿ ಪರ್ವೇಜ್ ಎಂಬಾತ ಬೆರದಿರುವ ಪತ್ರ ಎನ್ನಲಾಗಿದೆ.

ಎಚ್ಚರಿಕೆಯಿಂದಿರುವಂತೆ ಪತ್ರದಲ್ಲಿ ಸೂಚಿಸಲಾಗಿದ್ದು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಈಶ್ವರಪ್ಪ, ಶೋಭ ಕರಂದ್ಲಾಜೆ ಬಗ್ಗೆ ಅವಹೇಳನಕಾರಿ ಬರಹ ಇದ್ದು, ದಾಬೋಲ್ಕರ್, ಪನ್ಸಾರೆ, ಗೌರಿ ಲಂಕೇಶ್, ಕಲಬುರ್ಗಿ ಅವರನ್ನು ಕೊಂದಿರೋದು ಆರ್.ಎಸ್.ಎಸ್, ವಿ.ಹೆಚ್.ಪಿ ಕಾರ್ಯಕರ್ತರೇ ಎಂದು ಪತ್ರದಲ್ಲಿ ಆರೋಪಿಸಿರುವುದಾಗಿಯೂ, ರಾಜ್ಯದಲ್ಲಿ ಆರ್.ಎಸ್.ಎಸ್ ನವರು ಶಾಂತಿ ನೆಲೆಸಲು ಬಿಡುತ್ತಿಲ್ಲ ಎಂಬ ಬರಹವಿದೆ ಎಂದು ತಿಳಿದು ಬಂದಿದೆ.

ನಿಮಗೆ ಎಚ್ಚರಿಕೆ ನೀಡುತ್ತಿದ್ದೇವೆ ಸೂರತ್ಕಲ್ನ ಸತ್ಯಜಿತ್, ಗೋಪಾಲ್, ಜಗದೀಶ್, ಪ್ರಮೋದ್ ಮುತಾಲಿಕ್ ಇವರು ಮುಸ್ಲಿಂ ಜನರಿಗೆ ತೊಂದರೆ ನೀಡುತ್ತಿದ್ದಾರೆ. ನಿಮಗೆ ನಮ್ಮ ಹುಡುಗರ ಜೊತೆ ಬಡಿದಾಡಲು ತಾಕತ್ತು ಇಲ್ಲ. ದೀಪಕ್ ರಾವ್ನನ್ನು ಕೊಂದಿದ್ದು ನಮ್ಮ ಹುಡುಗರೇ, ಯಾರೂ ಕೂಡ ನಮ್ಮ ಹುಡುಗರನ್ನು ಏನು ಮಾಡಲು ಸಾಧ್ಯವಿಲ್ಲ. ನೀವು ಮುಸ್ಲಿಂ ಹುಡುಗರಿಗೆ ಮತ್ತು ಹುಡುಗಿಯರಿಗೆ ಸುಮ್ಮನೆ ತೊಂದರೆ ನೀಡುತ್ತಿದ್ದೀರೀ ಎಂದೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದೆನ್ನಲಾಗುತ್ತಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ