ಪ್ರಧಾನಿ ಮೋದಿಗೆ ಹೆಚ್ಡಿಕೆ ಟಾಂಗ್

kumaraswamy tong to pm narendra modi

30-01-2018

ವಿಜಯಪುರ‌: ನಮ್ಮ ಯುವಕರು ಪಕೋಡಾ ಮಾರಾಟ ಮಾಡಿ ಬದುಬೇಕಿದೆ, ಇದೇ ಪ್ರಧಾನಿ ಮೋದಿ‌ ಅವರ ಮೇಕ್ ಇನ್ ಇಂಡಿಯಾ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರ ಸ್ವಾಮಿ ವ್ಯಂಗ್ಯವಾಡಿದ್ದಾರೆ. ವಿಜಯಪುರದಲ್ಲಿಂದು ಮಾತನಾಡಿದ ಅವರು, ಪಕೋಡಾ‌ ಮಾರುವಂತೆ ಪುಕ್ಕಟೆ ಸಲಹೆ‌ ನೀಡಲು ಮೋದಿ ಪ್ರಧಾನಿಯಾಗಬೇಕಿತ್ತ ಎಂದು, ಉದ್ಯೋಗ ಸೃಷ್ಟಿ ಕುರಿತ ಪ್ರಧಾನಿ ಮೋದಿ ನಿಲುವಿಗೆ ಕುಮಾರ ಸ್ವಾಮಿ ಅವರು ಟಾಂಗ್ ನೀಡಿದ್ದಾರೆ.

ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡೋದಾಗಿ ಪ್ರಧಾನಿ ಮೋದಿ ಹೇಳಿದ್ದರು. ಮೇಕ್ ಇನ್ ಇಂಡಿಯಾ ಬಗ್ಗೆ ಮಾತನಾಡಿದ್ದರು. ಇದೀಗ ಪಕೋಡಾ ಮಾರಾಟ ಮಾಡುವುದೂ ಸಹ‌ ಮೇಕ್ ಇನ್ ಇಂಡಿಯಾ ಎಂದು ಜನರಿಗೆ ಇವಾಗಾ ಗೊತ್ತಾಗಿದೆ. ಉದ್ಯೋಗ ಕುರಿತು ಮೋದಿ ನೀಡಿದ ಭರವಸೆ ಯಾವುದು ಎಂದು ಜನರಿಗೆ‌ ಈಗ ಗೊತ್ತಾಗಿದೆ ಎಂದು ಲೇವಡಿ ಮಾಡಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


HDK statement is truue
  • Shivakumar.c
  • Transport