ನಾನು ರಾಜಕೀಯಕ್ಕೆ ಬರಲು ರೆಡಿಯಾಗಿದ್ದೇನೆ : ಪ್ರೊಫೆಸರ್ ಕೆ.ಎಸ್.ರಂಗಪ್ಪ

Kannada News

25-04-2017

ಮೈಸೂರು: ನಾನು ರಾಜಕೀಯಕ್ಕೆ ಬರಲು ಎಲ್ಲರು ಸೇರಿಕೊಂಡು ಮಾನಸಿಕವಾಗಿ ಸಿದ್ದ ಮಾಡಿದ್ದಾರೆ. ಮೈಸೂರಿನಲ್ಲಿ ಮೈಸೂರು ವಿವಿ ವಿಶ್ರಾಂತಿ ಕುಲಪತಿ ಪ್ರೊಫೆಸರ್ ಕೆ.ಎಸ್.ರಂಗಪ್ಪ ಹೇಳಿಕೆ ನೀಡಿದರು. ಸದ್ಯಕ್ಕೆ ವಿಶ್ರಾಂತಿ ಜೀವನ ನಡೆಸುತ್ತಿದ್ದೇನೆ. ಎಲ್ಲ ಕಡೆಯಿಂದ ರಾಜಕೀಯಕ್ಕೆ ಬರುವಂತೆ ಒತ್ತಾಯ ಕೇಳಿಬಂದಿದೆ. ಈ ಮೊದಲು ಈ ಬಗ್ಗೆ ಚಿಂತನೆ ಮಾಡಿರಲಿಲ್ಲ, ಆದ್ರೆ ಈಗ ಆ ಸಮಯ ಬಂದಿದೆ. ಜೆಡಿಎಸ್ ಪಕ್ಷ ನಮ್ಮ ಕುಟುಂಬದ ಭಾಗವು ಆಗಿದೆ. ಈ ಹಿನ್ನೆಲೆಯಲ್ಲಿ ಎಚ್.ಡಿ ಕುಮಾರಸ್ವಾಮಿಯವರು ಮೈಸೂರಿನ ಚಾಮರಾಜ ಕ್ಷೇತ್ರದಿಂದ ಕಣಕ್ಕಿಳಿಯುವಂತೆ ಮನವಿ ಮಾಡಿದ್ದಾರೆ. ನಾನು ಕೂಡ ಚಾಮರಾಜ ಕ್ಷೇತ್ರದಲ್ಲೇ ಶೈಕ್ಷಣಿಕ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದೇನೆ. ಹಲವು ದಿನದಿಂದ ರಾಜಕೀಯ ಸೇರುವ ವಿಚಾರವನ್ನು ಮುಂದೂಡುತ್ತಲೆ ಬಂದಿದ್ದೆ.  ಇದೀಗ ಎಲ್ಲರ ಒತ್ತಾಯದ ಮೇರೆಗೆ ರಾಜಕೀಯ ಪ್ರವೇಶಕ್ಕೆ ನಿರ್ಧಾರ ಮಾಡಿದ್ದೇನೆ. ಮುಂದಿನ ಬೆಳವಣಿಗೆಯನ್ನು ಪಕ್ಷದ ರಾಜ್ಯ ಹಾಗೂ ರಾಷ್ಟ್ರಾಧ್ಯಕ್ಷರು ನಿರ್ಧರಿಸುತ್ತಾರೆ. ನಾನು ರಾಜಕೀಯಕ್ಕೆ ಬಂದರೂ ಶೈಕ್ಷಣಿಕ ಕ್ಷೇತ್ರವನ್ನು ಬಿಡುವುದಿಲ್ಲ. ನನ್ನ ಸಾಧನೆ ಶೈಕ್ಷಣಿಕ ಕ್ಷೇತ್ರದಲ್ಲೆ ಆಗಿರುವುದರಿಂದ ಅದರ ಜೊತೆ ಜೊತೆಗೆ ರಾಜಕೀಯ ಮಾಡುತ್ತೇನೆ. ರಾಜಕೀಯದಲ್ಲಿನ ಆದ್ಯತೆಗಳ ಬಗ್ಗೆ ಈಗ ಮಾತನಾಡವುದಿಲ್ಲ. ಪರಿಪೂರ್ಣವಾಗಿ ರಾಜಕೀಯಕ್ಕೆ ಬಂದ ಮೇಲೆ ನನ್ನ ಆದ್ಯತೆಗಳ ಬಗ್ಗೆ ಮಾತನಾಡುತ್ತೇನೆ ಎಂದು ಮೈಸೂರಿನಲ್ಲಿ ಮೈಸೂರು ವಿವಿ ವಿಶ್ರಾಂತಿ ಕುಲಪತಿ ಪ್ರೊಫೆಸರ್ ಕೆ.ಎಸ್.ರಂಗಪ್ಪ ಮಾಧ್ಯಮಗಳಿಗೆ ಹೇಳಿಕೆ ನೀಡಿದರು.

Links :ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ