ಬೀದರ್ ಬಂದ್

bidar Bandh today

30-01-2018

ಬೀದರ್: ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಕೋಸಮ್ ಗ್ರಾಮದ ಯುವತಿ ಮೇಲೆ ಅತ್ಯಾಚಾರ ಮತ್ತು ಬರ್ಬರ ಹತ್ಯೆ ಖಂಡಿಸಿ, ಮೃತರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ, ಆರೋಪಿಗೆ ಗಲ್ಲು ಶಿಕ್ಷೆ, ಮತ್ತು ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು, ಹಿಂದೂಪರ ಸಂಘಟನೆಗಳು ಇಂದು ಬೀದರ್ ಬಂದ್ಗೆ ಕರೆ ನೀಡಿದ್ದು. ಬೀದರ್ ಬಂದ್ಗೆ ವ್ಯಾಪಾರಸ್ಥರ ಸಂಘ, ವಾಣಿಜ್ಯ ಮತ್ತು ಕೈಗಾರಿಕಾ ಸಂಘ, ವಕೀಲರ ಸಂಘ, ಸವಿತಾ ಸಮಾಜದವರು ಸೇರಿದಂತೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿವೆ. ಬೆಳಿಗ್ಗೆಯಿಂದಲೇ ಅಂಗಡಿ-ಮುಂಗಟ್ಟುಗಳು ಓಪನ್ ಮಾಡದೇ ಬಂದ್ಗೆ ಬೆಂಬಲಿಸಿರುವ ಹಿನ್ನೆಲೆ ಸಾಂಕೇತಿಕ ಬಂದ್ ಯಶಸ್ವಿಯಾಗಿದೆ. ಬೀದರ್ ಜಿಲ್ಲಾಡಳಿತ ಯಾವುದೇ ಪ್ರತಿಭಟನೆ, ಮೆರವಣಿಗೆ ಮಾಡದಂತೆ ಸಾಂಕೇತಿಕ ಬಂದ್ ಮಾಡುವಂತೆ ಆದೇಶ ಮಾಡಿತ್ತು. ಇನ್ನೂ ಬಸ್ಗಳು ಎಂದಿನಂತೆ ಸಂಚರಿಸುತ್ತಿವೆ. ಶಾಲಾ-ಕಾಲೇಜುಗಳಿಗೂ ರಜೆ ನೀಡಿಲ್ಲ, ಅವು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ಇನ್ನು ಬಂದ್ಗೆ ಹಿಂದೂಪರ ಸಂಘಟನೆಗಳು ಸೇರಿದಂತೆ, ಹಲವು ಸಂಘಟನೆಗಳು ಬೆಂಬಲ ಸೂಚಿಸಿದ್ದು, ಬೀದರ್ ಬಂದ್ ಯಶಸ್ವಿಯಾಗಿದೆ ಅಂತಲೇ ಹೇಳಬಹುದು.


ಸಂಬಂಧಿತ ಟ್ಯಾಗ್ಗಳು

Bandh Rape and murder ಅತ್ಯಾಚಾರ ಸಂಘಟನೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ