ಪತ್ನಿ ಕೊಲೆ ಪತಿಗೆ ಜೀವಾವಧಿ ಶಿಕ್ಷೆ

wife murder: lifetime imprisonment to husband

29-01-2018

ಬೆಂಗಳೂರು: ಶೀಲ ಶಂಕಿಸಿ ಪತ್ನಿಯನ್ನು ಹತ್ಯೆಗೈದಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿ ಕೋರ್ಟ್ ಆದೇಶಿಸಿದೆ. 2013ರಲ್ಲಿ ಸಂಜಯ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಪ್ರಕರಣದ ಕುರಿತು ವಿಚಾರಣೆ ನಡೆಸಿದ ಕೋರ್ಟ್ ಆರೋಪಿ ಸೆಂದಿಲ್ ಎಂಬಾತನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಸೆಂದಿಲ್ ತನ್ನ ಪತ್ನಿ ರಾಣಿಯ ಶೀಲ ಶಂಕಿಸಿ ಕೊಲೆ ಮಾಡಿದ್ದ. ಇದೀಗ ಆರೋಪ ರುಜುವಾತಾದ ಹಿನ್ನೆಲೆ, ಪ್ರಧಾನ ಜಿಲ್ಲಾ & ಸೆಷನ್ಸ್ ನ್ಯಾಯಾಧೀಶರಾದ ಶಿವಶಂಕರ್ ಅಮರಣ್ಣನವರ್ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. ಅದಲ್ಲದೇ ಕೊಲೆ ಆರೋಪಿಗೆ  ರೂ.25000 ದಂಡವನ್ನೂ ವಿಧಿಸಿದೆ. ದಂಡ ಕೊಡಲು ವಿಫಲವಾದಲ್ಲಿ ಹೆಚ್ಚುವರಿ 6 ತಿಂಗಳ ಸಾದಾ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

 


ಸಂಬಂಧಿತ ಟ್ಯಾಗ್ಗಳು

court lifetime sentence ಶೀಲ ಶಂಕಿಸಿ ಸೆಷನ್ಸ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ