ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಚಿನ್ನಕ್ಕೆ ಕನ್ನ

chain snatch  while traveling on bike

29-01-2018

ಬೆಂಗಳೂರು: ಬೈಕ್‍ನಲ್ಲಿ ಹಿಂದೆ ಕುಳಿತು ಹೋಗುತ್ತಿದ್ದ ಮಹಿಳೆಯ ಚಿನ್ನದಸರವನ್ನು ಹಿಂದಿನಿಂದ ಮತ್ತೊಂದು ಬೈಕ್‍ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕಸಿದು ಪರಾರಿಯಾಗಿರುವ ದುರ್ಘಟನೆ ಬೆಳ್ಳಂದೂರಿನಲ್ಲಿ ನಿನ್ನೆ ರಾತ್ರಿ ನಡೆದಿದೆ. ಕೋರಮಂಗಲದ ಶಿವದಾಸ್ ಅವರು, ಪತ್ನಿ ಪ್ರಿನ್ಸಿ ದಾಸ್ ಅವರನ್ನು ಬೈಕ್‍ನಲ್ಲಿ ಹಿಂದೆ ಕೂರಿಸಿಕೊಂಡು ಕೆಲಸದ ಮೇಲೆ ಬೆಳ್ಳಂದೂರಿಗೆ ಹೋಗಿ ಅಲ್ಲಿನ ಅಗಸ್ತ್ಯ ಗಾರ್ಡನ್ ಅಪಾರ್ಟ್‍ಮೆಂಟ್ ರಸ್ತೆಯಲ್ಲಿ ಮನೆಗೆ ರಾತ್ರಿ 7.50ರ ವೇಳೆ ವಾಪಸ್ ಹೋಗುತ್ತಿದ್ದರು. ಈ ವೇಳೆ ಹಿಂದಿನಿಂದ ಬೈಕ್‍ನಲ್ಲಿ ಬಂದ ಪ್ರಿನ್ಸಿ ದಾಸ್ ಅವರ ಕತ್ತಿನಲ್ಲಿದ್ದ 42 ಗ್ರಾಂ ತೂಕದ ಚಿನ್ನದ ಸರವನ್ನು ಕಸಿದು ಕ್ಷಣಾರ್ಧದಲ್ಲಿ ಪರಾರಿಯಾಗಿದ್ದಾರೆ. ಪ್ರಕರಣ ದಾಖಲಿಸಿರುವ ಬೆಳ್ಳಂದೂರು ಪೊಲೀಸ್ ಇನ್ಸ್ ಪೆಕ್ಟರ್ ವಿಕ್ಟರ್ ಅವರು, ದುಷ್ಕರ್ಮಿಗಳಿಗಾಗಿ ಬಲೆ ಬೀಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

chain snatch gold chain ಬೈಕ್‍ ಪರಾರಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ