ನಾಗರಹೊಳೆಯಲ್ಲಿ ಹೆಣ್ಣಾನೆ ಸಾವು

25-04-2017
ಮೈಸೂರು: ಎಳನೀರು ಕಟ್ಟೆ ಅರಣ್ಯ ಪ್ರದೇಶದಲ್ಲಿ 65 ವರ್ಷ ಪ್ರಾಯದ ಹೆಣ್ಣಾನೆ ದಿರ್ಘಕಾಲದ ಅನಾರೋಗ್ಯದಿಂದ ಸಾವನ್ನಪ್ಪಿದೆ. ವೈದ್ಯ ಉಮಾಶಂಕರ್ ನೇತೃತ್ವದಲ್ಲಿ ಆನೆಯ ಮರಣೋತ್ತರ ಪರೀಕ್ಷೆ ಮಾಡಲಾಗಿದ್ದು ಶ್ವಾಸಕೋಶದ ತೊಂದರೆಯಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ನಾಗರಹೊಳೆಯ ವೀರನಹೊಸಳ್ಳಿ ರೇಂಜ್ನಲ್ಲಿ ಆನೆ ಮೃತದೇಹ ಪತ್ತೆಯಾದ ಹಿನ್ನೆಲೆ ಸ್ಥಳಕ್ಕೆ ಹಿರಿಯ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
.
ಒಂದು ಕಮೆಂಟನ್ನು ಹಾಕಿ