‘ಗೌರಿ ಹತ್ಯೆ ಸಿಬಿಐಗೆ: ಹೈಕೋರ್ಟ್ ಗೆ ಅರ್ಜಿ’..?

Gauri murder case: indrajit lankesh requesting to handover the case to cbi

29-01-2018

ಬೆಂಗಳೂರು: ಇಂದು ಪತ್ರಕರ್ತೆ ಗೌರಿ ಲಂಕೇಶ್ ಜನ್ಮದಿನ. ಗೌರಿ ಅವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಅವರ ಸಹೋದರ ಇಂದ್ರಜಿತ್ ಲಂಕೇಶ್ ತಮ್ಮ ಅಕ್ಕನ ಸಮಾಧಿಗೆ ತೆರಳಿ ಪೂಜೆ ಸಲ್ಲಿಸಿದರು. ಗೌರಿ ಲಂಕೇಶ್ ಫೋಟೋವನ್ನು ಸಮಾಧಿ ಮೇಲಿಟ್ಟು ಇಂದ್ರಜಿತ್ ಲಂಕೇಶ್ ಮತ್ತು ಅವರ ಪತ್ನಿ ಸೇರಿದಂತೆ ಹಲವರು ಪೂಜೆ ಸಲ್ಲಿಸಿ ಹುಟ್ಟುಹಬ್ಬ ಆಚರಿಸಲಾಯಿತು. ನಂತರ ಸುದ್ದಿಗಾರರ ಜೊತೆ ಮಾತನಾಡಿದ ಇಂದ್ರಜಿತ್ ಅವರು, ಗೌರಿ ಹತ್ಯೆಯಾಗಿ ಐದು ತಿಂಗಳಾಗುತ್ತಿವೆ. ಆದರೂ ಇದುವರೆಗೂ ಆರೋಪಿಗಳನ್ನು ಬಂಧಿಸುವ ಕೆಲಸ ಎಸ್‍ಐಟಿಯಿಂದ ಸಾಧ್ಯವಾಗಿಲ್ಲ ಎಂದು ದೂರಿದರು.

ಚಿಕ್ಕವಳಿದ್ದಾಗ ಗೌರಿಯ ಹುಟ್ಟು ಹಬ್ಬವನ್ನು ಮನೆಯವರೆಲ್ಲ ಸೇರಿ ಸಂಭ್ರಮದಿಂದ ಆಚರಿಸುತ್ತಿದ್ದೆವು. ಆಕೆ ಪತ್ರಕರ್ತೆಯಾದ ನಂತರ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರಲಿಲ್ಲ ಇಂದು ಅಕ್ಕನಿಲ್ಲದೇ ಮನೆಯಲ್ಲಿ ಸಂಭ್ರಮಾಚರಣೆ ಇಲ್ಲ. ಗೌರಿ ಹಂತಕರನ್ನು ಇದುವರೆಗೂ ಬಂಧಿಸಲಾಗಿಲ್ಲ. ಈ ಹಿನ್ನೆಲೆಯಲ್ಲಿ ಆಕೆಯ ಹುಟ್ಟು ಹಬ್ಬದ ದಿನದಂದೇ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದೇನೆ ಎಂದು ಇಂದ್ರಜಿತ್ ತಿಳಿಸಿದರು.

ಗೌರಿ ಕೊಲೆಯಾಗಿ ಐದು ತಿಂಗಳಾದರೂ ಸರ್ಕಾರ ಕೊಲೆಗಡುಕರನ್ನು ಬಂಧಿಸುವುದನ್ನು ಬಿಟ್ಟು ರಾಜಕೀಯ ನಡೆಸಲಾಗುತ್ತಿದೆ. ಎಸ್‍ಐಟಿ ಅಧಿಕಾರಿಗಳು ಬಿಡುಗಡೆ ಮಾಡಿರುವ ಶಂಕಿತ ಆರೋಪಿಗಳ ರೇಖಾ ಚಿತ್ರದಲ್ಲಿ ಹಣೆಗೆ ಕುಂಕುಮವಿಟ್ಟು ರಾಜಕೀಯ ಆಟ ಆಡುವುದು ಸರಿಯಲ್ಲ. ತನಿಖೆ ವಿಚಾರವಾಗಿ ನಾನು ಇದುವರೆಗೂ ಸಿಎಂ ಸಿದ್ದರಾಮಯ್ಯ ಅವರ ಜೊತೆ ಚರ್ಚೆ ಮಾಡಿಲ್ಲ ಎಂದರು. ಈ ಹಿಂದೆ ಸಿಎಂ ಸಿದ್ದರಾಮಯ್ಯನವರು ಭಾಗಿಯಾಗಿದ್ದ ಗೌರಿ ಸಂಬಂಧಿತ ಕಾರ್ಯಕ್ರಮಗಳಿಗೆ ಹೋದಾಗ ನನಗೆ ಮುಜುಗರವಾಗಿದೆ. ಈ ಹಿನ್ನೆಲೆಯಲ್ಲಿ ಅವರೊಂದಿಗೆ ಇಂದು ಯಾವುದೇ ಸಭೆಗಳಿಗೆ ನಾನು ಹೋಗುವುದಿಲ್ಲ ಎಂದು ಇಂದ್ರಜಿತ್ ಸ್ಪಷ್ಟಪಡಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Gauri Lankesh Journalist ರೇಖಾ ಚಿತ್ರ ರಾಜಕೀಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ