ಪ್ರಬುದ್ಧತೆಯ ಪ್ರಶ್ನೆ?

Question of political machurity..?

29-01-2018

ಈ ಮೂವರ ಪೈಕಿ ರಾಜಕೀಯ ಪ್ರಬುದ್ಧತೆ ಯಾರಿಗಿದೆ? ಎಂಬ ಬಗ್ಗೆ ಸೂಪರ್ ಸುದ್ದಿ ಒಂದು ಸಮೀಕ್ಷೆ ನಡೆಸಿದೆ. ಸುಮಾರು 30 ಸಾವಿರಕ್ಕೂ ಹೆಚ್ಚು ಓದುಗರು ಈ ಸಮೀಕ್ಷೆಯನ್ನು ಗಮನಿಸಿದ್ದಾರೆ ಹಾಗೂ 2ಸಾವಿರಕ್ಕೂ ಹೆಚ್ಚು ಜನರು ತಮ್ಮ ಮತ ಚಲಾಯಿಸಿದ್ದಾರೆ. ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಮುಖ್ಯಮಂತ್ರಿಗಳಾದ ಹೆಚ್‌.ಡಿ.ಕುಮಾರ ಸ್ವಾಮಿಹಾಗೂ ಬಿ.ಎಸ್‌.ಯಡಿಯೂರಪ್ಪನವರ ಪೈಕಿ ಯಾರು ರಾಜಕೀಯವಾಗಿ ಪ್ರಬುದ್ಧರಾಗಿದ್ದಾರೆ ಎಂಬ ನಮ್ಮಪ್ರಶ್ನೆಗೆ, ಸಾರ್ವಜನಿಕರಿಂದ ಆಶ್ಚರ್ಯಕರ ಅನ್ನಬಹುದಾದ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಆರಂಭದಲ್ಲಿ, ಸಿದ್ದರಾಮಯ್ಯ ಪರವಾಗಿ ಅಂದರೆ, ಅವರು ರಾಜಕೀಯವಾಗಿ ಹೆಚ್ಚು ಪ್ರಬುದ್ಧರು ಎಂಬ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಆದರೆ, ಪ್ರತಿಕ್ರಿಯೆ ನೀಡುವವರ ಸಂಖ್ಯೆ ಏರಿಕೆಯಾಗುತ್ತಿದ್ದಂತೆ, ಮಾಜಿ ಸಿಎಂ ಕುಮಾರ ಸ್ವಾಮಿ ಅವರನ್ನು ಪ್ರಬುದ್ಧ ರಾಜಕಾರಣಿಯಾಗಿ ಕಂಡವರ ಸಂಖ್ಯೆ ಹೆಚ್ಚಾಗುತ್ತಾಹೋಗಿದೆ. ಶೇ.11 ರಷ್ಟು ಜನ ಮಾಜಿ ಸಿಎಂ ಯಡಿಯೂರಪ್ಪ ಪರ, ಹಾಲಿ ಸಿಎಂ ಸಿದ್ದರಾಮಯ್ಯ ಪರ ಶೇ.21ರಷ್ಟು ಜನ ಮತ್ತು ಹೆಚ್.ಡಿ.ಕುಮಾರ ಸ್ವಾಮಿ ಅವರ ಪರವಾಗಿ ಶೇಕಡ 68ರಷ್ಟು ಜನ ತಮ್ಮ ಒಲವು ವ್ಯಕ್ತಪಡಿಸಿದ್ದಾರೆ.  ವಯಸ್ಸು ಮತ್ತು ರಾಜಕೀಯ ಅನುಭವಗಳೆರಡರಲ್ಲೂ ಸಿದ್ದರಾಮಯ್ಯ ಮತ್ತು ಯಡಿಯೂರಪ್ಪನವರಿಗಿಂತ ಕುಮಾರ ಸ್ವಾಮಿಯವರು ಕಿರಿಯರು. ಹೀಗಿದ್ದರೂ ಕೂಡ, ಅವರೇ ರಾಜಕೀಯವಾಗಿ ಪ್ರಬುದ್ಧರು ಅನ್ನುವ ಅಭಿಪ್ರಾಯ ವ್ಯಕ್ತವಾಗಿದೆ.

ಸೂಪರ್ ಸುದ್ದಿ ನಡೆಸಿರುವ ಈ ಸಮೀಕ್ಷೆ ಸರಳವಾಗಿದ್ದರೂ ಕೂಡ, ಪುನರಾವರ್ತನೆ ಅಥವ ಒಬ್ಬರು ಹಲವು ಬಾರಿ ತಮ್ಮ ಮತ ಚಲಾಯಿಸುವಂಥದಕ್ಕೆ ಇಲ್ಲಿ ಅವಕಾಶವಿಲ್ಲ. ಹೀಗಾಗಿ, ನಿಷ್ಪಕ್ಷಪಾತವಾಗಿರುವ ಈ ಸಮೀಕ್ಷೆಯಲ್ಲಿ ಸುಮಾರು 2 ಸಾವಿರ ಜನರಷ್ಟೇ ಪಾಲ್ಗೊಂಡಿದ್ದರೂ ಕೂಡ, ಅವರ ಅಭಿಪ್ರಾಯ ರಾಜ್ಯರಾಜಕಾರಣದ ದಿಕ್ಸೂಚಿಯೂ ಆಗಿರಬಹುದು.


ಸಂಬಂಧಿತ ಟ್ಯಾಗ್ಗಳು

political Maturity ಪ್ರಬುದ್ಧತೆ ಆಶ್ಚರ್ಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


Won of the good poll
  • Hidayath ulla
  • Hotel Beicsnas