73 ಸಾವಿರ ಡ್ರಂಕ್ ಅಂಡ್ ಡ್ರೈವ್ ಕೇಸ್ ದಾಖಲು

73,000 Drink and Drive Cases Recorded last year

29-01-2018

ಬೆಂಗಳೂರು: ನಗರದಲ್ಲಿ ಕಳೆದ ವರ್ಷ(2017) ಪಾನಮತ್ತರಾಗಿ ವಾಹನ ಚಲಾಯಿಸಿದ ಬರೋಬ್ಬರಿ 73,741 ಪ್ರಕರಣಗಳು ದಾಖಲಾಗಿದ್ದು, ಹಗಲಲ್ಲೂ ಕುಡಿದು ವಾಹನ ಚಾಲನೆ ಮಾಡುವವರ ವಿರುದ್ಧ ಪ್ರಕರಣಗಳು ದಾಖಲಾಗಿದ್ದಿದ್ದರೆ ಈ ಸಂಖ್ಯೆ ಇನ್ನೂ ಹೆಚ್ಚಾಗುತ್ತಿತ್ತು. ಏಕೆಂದರೆ ನಗರದ ಸಂಚಾರ ಪೊಲೀಸರು ಮದ್ಯ ಸೇವಿಸಿ ವಾಹನ ಚಾಲನೆ ಮಾಡುವವರನ್ನು ತಪಾಸಣೆಗೊಳಪಡಿಸುವುದು ರಾತ್ರಿ ವೇಳೆ ಮಾತ್ರ.

ಹಗಲಿನಲ್ಲೂ ಮದ್ಯ ಸೇವಿಸಿ ವಾಹನ ಚಾಲನೆ ಮಾಡುವವರ ಸಂಖ್ಯೆ ಹೆಚ್ಚಿದ್ದು, ಶನಿವಾರ, ಭಾನುವಾರ, ಸರಣಿ ರಜೆದಿನಗಳಲ್ಲಿ ಈ ಸಂಖ್ಯೆ ಎಂದಿಗಿಂತ ಹೆಚ್ಚಾಗಿರುತ್ತದೆ. ಸಂಚಾರ ಪೊಲೀಸ್ ವಿಭಾಗದಲ್ಲಿನ ಸಿಬ್ಬಂದಿಗಳ ಕೊರತೆ ಇರುವ ಹಿನ್ನೆಲೆಯಲ್ಲಿ ಸಂಚಾರ ಪೊಲೀಸರು ಕೇವಲ ರಾತ್ರಿ ವೇಳೆ ಮಾತ್ರ ಮದ್ಯ ಸೇವನೆ ತಪಾಸಣೆ ಮಾಡುತ್ತಿದ್ದು, ಜನರು ಇದನ್ನೇ ಅವಕಾಶವಾಗಿ ಬಳಸಿಕೊಂಡು ಹಗಲಿನಲ್ಲಿ ಮದ್ಯ ಸೇವನೆ ಮಾಡಿ ವಾಹನ ಚಲಾಯಿಸುತ್ತಿದ್ದಾರೆ. ಆದರೆ ರಸ್ತೆ ಅಪಘಾತಗಳು ಸಂಭವಿಸಿದಾಗ ಮಾತ್ರವಷ್ಟೇ ಈ ರೀತಿಯ ಪ್ರಕರಣಗಳು ಬೆಳಕಿಗೆ ಬರುತ್ತವೆ. 

ಸಂಚಾರಿ ಪೊಲೀಸರು ಬೆಳಿಗ್ಗೆ ಹೊತ್ತಿನಲ್ಲೂ ಮದ್ಯ ಸೇವನೆ ತಪಾಸಣೆ ಮಾಡದೇ ಇರುವುದಕ್ಕೆ ಮೂರು ಪ್ರಧಾನ ಕಾರಣಗಳಿವೆ ಎನ್ನುವುದನ್ನು ಸಂಚಾರ ವಿಷಯಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಸಲಹೆಗಾರರಾಗಿರುವ ಎಂಎನ್ ಶ್ರೀಹರಿ ಅವರು ಪಟ್ಟಿ ಮಾಡುತ್ತಾರೆ.

ಮೊದಲನೆಯನ್ನು ಸಂಚಾರ ವಿಭಾದಲ್ಲಿ ಸಿಬ್ಬಂದಿಗಳ ಕೊರತೆ ಇದ್ದು ರಾತ್ರಿ ವೇಳೆಯಷ್ಟೇ ತಪಾಸಣೆ ನಡೆಯುತ್ತಿದೆ. ಎರಡನೆಯದಾಗಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದರೆ ಅದನ್ನು ಗಮನಿಸುವಂತಹ ಸ್ವಯಂ ಚಾಲಿತ ತಂತ್ರಜ್ಞಾನ ಇಲ್ಲದೇ ಇರುವುದೂ ಸಹ ಹಗಲು ಮದ್ಯ ಸೇವನೆ ಮಾಡಿ ವಾಹನ ಚಾಲನೆ ಮಾಡುವುದಕ್ಕೂ ಕಾರಣವಾಗಿದೆ ಎನ್ನುತ್ತಾರೆ ಅವರು.

ಅಷ್ಟೇ ಅಲ್ಲದೇ ಬೆಳಿಗ್ಗೆ ವೇಳೆಯಲ್ಲೂ ಮದ್ಯ ತಪಾಸಣೆಗೆ ನಿಂತರೆ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿ ಈಗಿರುವ ವಾಹನ ದಟ್ಟಣೆಗಿಂತಲೂ ಹೆಚ್ಚು ವಾಹನ ದಟ್ಟಣೆ ಉಂಟಾಗಲಿದೆ ಈ ಹಿನ್ನೆಲೆಯಲ್ಲಿ ಹಗಲಿನಲ್ಲೂ ಮದ್ಯ ಸೇವಿಸಿ ವಾಹನ ಚಾಲನೆ ಮಾಡುವವರನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಲು ಸಾಧ್ಯವಾಗುತ್ತಿಲ್ಲ ಎಂದು ಎಂಎನ್ ಶ್ರೀಹರಿ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

drunk and drive Traffic police ಮದ್ಯ ಸೇವಿಸಿ ಸಂಚಾರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ