ಜೀವನದಲ್ಲಿ ಜಿಗುಪ್ಸೆ ಮಹಿಳೆ ಆತ್ಮಹತ್ಯೆ

women committed suicide: bengaluru

29-01-2018

ಬೆಂಗಳೂರು: ಕೆಂಗೇರಿ ಉಪನಗರದಲ್ಲಿ ನಿನ್ನೆ ರಾತ್ರಿ ಜೀವನದಲ್ಲಿ ಜಿಗುಪ್ಸೆ ಹೊಂದಿದ ಮಹಿಳೆಯೊಬ್ಬರು ನೇಣಿಗೆ ಶರಣಾಗಿರುವ ದುರ್ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಕೆಂಗೇರಿ ಉಪನಗರದ ಹಳೇ ಗಿರಿಯನ ಹಳ್ಳಿಯ ವಿನೋದಮ್ಮ (45)ಎಂದು ಗುರುತಿಸಲಾಗಿದೆ. ಅಪರಾಧ ಪ್ರಕರಣವೊಂದರಲ್ಲಿ ಭಾಗಿಯಾಗಿ ಅಳಿಯ ಜೈಲಿಗೆ ಹೋಗಿದ್ದರಿಂದ ನೊಂದಿದ್ದರು. ಒಂಟಿಯಾಗಿದ್ದ ವಿನೋದಮ್ಮ ಮಗಳ ಮನೆಗೆ ಆಗಾಗ ಹೋಗಿ ಬರುತ್ತಿದ್ದರು. ನಿನ್ನೆ ಕೂಡ ಮಗಳ ಮನೆಗೆ ಹೋಗಿ ಬಂದವರು ರಾತ್ರಿ 10.30ರ ವೇಳೆ ಫ್ಯಾನಿಗೆ ನೇಣು ಬಿಗಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಕರಣ ದಾಖಲಿಸಿರುವ ಕೆಂಗೇರಿ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

suicide women ಜಿಗುಪ್ಸೆ ಆತ್ಮಹತ್ಯೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ