ಪತ್ನಿ ಕೊಲೆ: ಆಭರಣಗಳೊಂದಿಗೆ ಪತಿ ಪರಾರಿ

wife Murder: The husband escapes with jewels

29-01-2018

ವಿಜಯಪುರ: ಕುಡಿದ ಮತ್ತಿನಲ್ಲಿ ಪತ್ನಿಯ ಕತ್ತು ‌ಹಿಸುಕಿ ಕೊಲೆಗೈದಿರುವ ಘಟನೆಯು, ವಿಜಯಪುರದಲ್ಲಿ ಬೆಳಕಿಗೆ ಬಂದಿದೆ. ಸಿದ್ದಮ್ಮ ಬಸವರಾಜ್ ಸಂಗಠಾಣ(24) ಕೊಲೆಯಾದ ಮಹಿಳೆ. ಕೌಟುಂಬಿಕ ಕಲಹದ ಹಿನ್ನೆಲೆ, ಜಿಲ್ಲೆಯ ಸಿಂದಗಿ ತಾಲ್ಲೂಕಿನ ಭಂಕಲಗಿ ಗ್ರಾಮದ ನಿವಾಸಿಯಾದ ಸಿದ್ದಮ್ಮನನ್ನು, ಕಟ್ಟಿಗೆಯಿಂದ ಕತ್ತು ಹಿಸುಕಿ ಕೊಲೆ ಮಾಡಿದ ಪಾಪಿ ಪತಿ, ಬಸವರಾಜ್ ಸಂಗಠಾಣ ಎಂದು ತಿಳಿದು ಬಂದಿದೆ. ಕೊಲೆಗೈದ ನಂತರ ಪತ್ನಿ ಮೈಮೇಲಿದ್ದ ಆಭರಣಗಳ ಸಮೇತ ಪರಾರಿಯಾಗಿದ್ದಾನೆ. ಇನ್ನು ಸ್ಥಳಕ್ಕೆ ಸಿಂದಗಿ ಠಾಣೆಯ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ