ಬಡೆಕೊಳ್ಳಮಠಲ್ಲಿ ಕಳ್ಳರ ಕೈಚಳಕ

Theft in Badekolla mutt Belagavi

29-01-2018

ಬೆಳಗಾವಿ: ಬೆಳಗಾವಿಯ ಬಡೆಕೊಳ್ಳಮಠದಲ್ಲಿ ಕಳ್ಳತನ ನಡೆದಿದೆ. ಬಡೆಕೊಳ್ಳ ಮಠದ ನಾಗೇಂದ್ರ ಅಜ್ಜನವರ ಮೂಲ ಗದ್ದುಗೆಯ ಬೆಳ್ಳಿ ಆಭರಣ ಹಾಗೂ ಕಾಳಿಕಾ ಮಂದಿರದಲ್ಲಿನ ಕಾಳಿಕಾದೇವಿ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ. ಸುಮಾರು 2 ಲಕ್ಷ 40 ಸಾವಿರ ಮೌಲ್ಯದ ಚಿನ್ನಾಭರಣಗಳನ್ನು ಕೊಳ್ಳೆಹೊಡೆದಿದ್ದಾರೆ.

ಮಠದ ನಾಗೇಂದ್ರ ಅಜ್ಜನವರ 65 ಸಾವಿರ ಮೌಲ್ಯದ 1 ಕೆಜಿ 4ಗ್ರಾಂ. ಬೆಳ್ಳಿಯ ಮುಖವಾಡ. 22 ಸಾವಿರ ಮೌಲ್ಯದ ಅರ್ಧ ಕೆಜಿ ಬೆಳ್ಳಿ ಪಾದುಕೆಗಳು ಸೇರಿದಂತೆ ಒಟ್ಟು 2.40 ಲಕ್ಷ ರೂಪಾಯಿ ಮೌಲ್ಯದ ನಗ ನಾಣ್ಯ ದೋಚಿ ಪರಾರಿಯಾಗಿದ್ದಾರೆ. ನಿನ್ನೆ ತಡರಾತ್ರಿ ಈ ಘಟನೆ ನಡೆದಿದ್ದು, ಕಳ್ಳರ ಕೈ ಚಳಕದ ದೃಶ್ಯಗಳು ಸಿಸಿಟಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ. ಈ ಕುರಿತಂತೆ, ಹಿರೇಬಾಗೆವಾಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು, ಕಳ್ಳರಿಗಾಗಿ ಬಲೆ ಬೀಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Gold-silver theft ಬಡೆಕೊಳ್ಳಮಠ ಪಾದುಕೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ