ಖೋಟಾ ನೋಟು: ಮೂವರ ಬಂಧನ

Fake notes printing: 3 arrested

29-01-2018

ವಿಜಯಪುರ: ಖೋಟಾ ನೋಟು ಮುದ್ರಿಸುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹಾಜಿಮಸ್ತಾನ ವಾಲೀಕಾರ್(23), ಸೀರಾಜ್ ಮಳ್ಳಿ(27), ಮೇಹಬೂಬ್ ವಾಲೀಕಾರ್(23) ಬಂಧಿತ ಆರೋಪಿಗಳು. ಇವರಿಂದ 67,200ರೂ ಮೌಲ್ಯದ ಖೋಟಾ ನೋಟುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಘಟನೆಯು ವಿಜಯಪುರ ನಗರದ ದರ್ಗಾ ಜೈಲು ಬಳಿಯ ಮನೆಯಲ್ಲಿ ಪತ್ತೆಯಾಗಿದೆ. ಖೋಟಾ ನೋಟು ತಯಾರಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಅಪರಾಧ ಗುಪ್ತವಾರ್ತಾ ವಿಭಾಗ (ಡಿಸಿಐಬಿ)ದ ಇನ್ಸ್ ಪೆಕ್ಟರ್ ಚಂದ್ರಕಾಂತ ಎಲ್.ಟಿ ನೇತೃತ್ವದಲ್ಲಿ ದಾಳಿ ನಡೆಸಿ ಅಕ್ರಮ ಬಯಲು ಮಾಡಿದ್ದಾರೆ. ಇನ್ನು ಆರೋಪಿಗಳಿಂದ 200, 500 ಹಾಗೂ 2000 ಮುಖ ಬೆಲೆಯ 67,200ರೂ ಮೌಲ್ಯದ ಖೋಟಾ ನೋಟುಗಳು, ನೋಟು ಮುದ್ರಿಸುವ 38 ಪೇಪರ್‌ಗಳು, 2 ಪ್ರಿಂಟರ್‌ಗಳನ್ನ ವಶಕ್ಕೆ ಪಡೆದು, ಡಿಸಿಐಬಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Fake Notes Printing ಖೋಟಾ ನೋಟು ಅಪರಾಧ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ