ಚಿರತೆ ನೋಡಲು ಮುಗಿಬಿದ್ದ ಜನ

leopard caught in ramanagar

27-01-2018

ರಾಮನಗರ: ರಾಮನಗರ ಜಿಲ್ಲೆಯ ಚಿಕ್ಕಸೂಲಿಕರೆ ಗ್ರಾಮದಲ್ಲಿ ಚಿರತೆಯೊಂದು ಬೋನಿಗೆ ಬಿದ್ದಿದೆ. ಕೆಲ ದಿನಗಳ ಹಿಂದೆ ಪುಟ್ಟ ಹಲಗಮ್ಮ ಎಂಬುವರನ್ನು ಕೊಂದಿದ್ದ ಚಿರತೆ ಎಂದು ಹೇಳಲಾಗುತ್ತಿದ್ದು, ಬೋನಿಗೆ ಸಿಕ್ಕಿಕೊಂಡಿದೆ. ದನ ಮೇಯಿಸಲು ಹೋಗಿದ್ದ ಸಂದರ್ಭದಲ್ಲಿ ಮಹಿಳೆಯೊಬ್ಬಳನ್ನು ಚಿರತೆ ಕೊಂದಿತ್ತು. ಇದರಿಂದ ಎಚ್ಚೆತ್ತುಕೊಂಡ ಅರಣ್ಯಾಧಿಕಾರಿಗಳು ಬೋನ್ ಇಟ್ಟಿದ್ದರು. ಮತ್ತೆ ದಾಳಿ ಮಾಡಲು ಮುಂದಾಗಿದ್ದ ಚಿರತೆ ಬಲೆಗೆ ಬಿದ್ದಿದೆ. ಚಿರತೆ ಸೆರೆಯಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಇನ್ನು ಸೆರೆಸಿಕ್ಕ ಚಿರತೆ ನೋಡಲು ಗ್ರಾಮದ ಜನತೆ ಮುಗಿಬೀಳುತ್ತಿದ್ದಾರೆ. ರಾಮನಗರ ಗ್ರಾಮಾಂತರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


ಸಂಬಂಧಿತ ಟ್ಯಾಗ್ಗಳು

leapord ramanagar ಗ್ರಾಮಾಂತರ ಮಹಿಳೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ