ಚಾಕುವಿನಿಂದ ಮನಸೋ ಇಚ್ಛೆ ಇರಿದು ಕೊಲೆ

Kannada News

24-04-2017

ಬೆಂಗಳೂರು, ಏ. 24 -ತಲಘಟ್ಟಪುರದ ಅಂಜನಾಪುರದ ಬಳಿ ಭಾನುವಾರ ರಾತ್ರಿ ಚಾಕುವಿನಿಂದ ಮನಸೋ ಇಚ್ಛೆ ಇರಿದು ರೌಡಿ ಉಮೇಶ್‍ನನ್ನು  ಭೀಕರವಾಗಿ ಕೊಲೆಗೈದಿರುವ ದುಷ್ಕರ್ಮಿಗಳು ಪರಾರಿಯಾಗಿರುವ ದುರ್ಘಟನೆ ನಡೆದಿದೆ.
ಅಂಜನಾಪುರದ ಖಾಲಿ ಶೆಡ್‍ಗಳ ಬಳಿ ರಾತ್ರಿ ಲಾಲ್ಬಹದ್ದೂರ್ ಶಾಸ್ತ್ರಿ ನಗರದ ಉಮೇಶ್ (32)ನ ಕತ್ತು, ತಲೆ, ಹೊಟ್ಟೆ ಇನ್ನಿತರ ಕಡೆ ಚಾಕುವಿನಿಂದ ಇರಿದು ಕೊಲೆಗೈದಿರುವ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ತಲಘಟ್ಟಪುರದಲ್ಲಿ 2012ರಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಉಮೇಶ್ನನ್ನ ರೌಡಿ ಪಟ್ಟಿಗೆ ಸೇರಿಸಲಾಗಿತ್ತು. ಯಾವುದೇ ಕೆಲಸ ಮಾಡದೆ ಓಡಾಡಿಕೊಂಡಿದ್ದ ಉಮೇಶ್ನನ್ನು ರಾತ್ರಿ ಪರಿಚಯಸ್ಥರೇ ಕರೆದೊಯ್ದು ಕಂಠಪೂರ್ತಿ ಕುಡಿಸಿ ಗಲಾಟೆ ತೆಗೆದು ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಅಂಜನಾಪುರದ ಖಾಲಿ ಶೆಡ್ಗಳ ಬಳಿ ಉಮೇಶ್ ಕೊಲೆಯಾಗಿ ಬಿದ್ದಿರುವ ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿರುವ ತಲಘಟ್ಟಪುರ ಪೊಲೀಸ್ ಇನ್ಸ್ಪೆಕ್ಟರ್ ರಾಮಪ್ಪ ಗುತ್ತೆರ್ರವರು ಪ್ರಕರಣ ದಾಖಲಿಸಿ ಕೊಲೆಗೈದ ದುಷ್ಕರ್ಮಿಗಳಿಗಾಗಿ ತೀವ್ರ ಶೋಧ ನಡೆಸಿದ್ದಾರೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಡಾ. ಎಸ್.ಜಿ. ಶರಣಪ್ಪ ತಿಳಿಸಿದ್ದಾರೆ.

Links :
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ