‘ಶೋಭಾ ಅವರಿಂದ ನನಗೆ ಜೀವಬೆದರಿಕೆ’27-01-2018

ಬಾಗಲೋಟೆ: ಯಡಿಯೂರಪ್ಪ ಮತ್ತು ಶೋಭಾ ಕರಂದ್ಲಾಜೆ ಕೇರಳದ ಚೋಟಾಡಿಕೆರೆ ಭಗವತಿ ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ ಎಂದು, ಕೆಜೆಪಿ ರಾಜ್ಯಾಧ್ಯಕ್ಷ ಪದ್ಮನಾಭ ಪ್ರಸನ್ನ ಮತ್ತೊಮ್ಮೆ ತಮ್ಮ ಹಳೆ ಮಾತುಗಳನ್ನು ಪುನರುಚ್ಛರಿಸಿದ್ದಾರೆ. ಬಾಗಕೋಟೆಯಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಯಡಿಯೂರಪ್ಪ ಮತ್ತು ಶೋಭಾ ಶಾಸ್ತ್ರೋಕ್ತವಾಗಿ ಮದುವೆಯಗಿದ್ದಾರೆ. ಅವರ ಮದುವೆ ದೃಶ್ಯಗಳ ಸಿಡಿಯನ್ನು ಸಮಯ ಬಂದಾಗ ಬಿಡುಗಡೆ ಮಾಡುತ್ತೇನೆ, ಆ ಸಿಡಿಯಲ್ಲಿ ಅವರ ಮದುವೆ ದೃಶ್ಯಗಳು ಬಿಟ್ಟು ಬೇರೇನೂ ಇಲ್ಲ ಎಂದು ಹೇಳಿದ್ದಾರೆ.

ಯಡಿಯೂರಪ್ಪ ಮೇಲೆ ನನಗೆ ದ್ವೇಷವಿಲ್ಲ, ಆದರೆ ಯಡಿಯೂರಪ್ಪ ಅವರಿಂದ ನನಗೆ ಸಾಕಷ್ಟು ಮೋಸವಾಗಿದೆ. ಯಡಿಯೂರಪ್ಪ ನನ್ನನ್ನು ಬಳಸಿಕೊಂಡು ಬಿಸಾಕಿದ್ದಾರೆ, ನನಗೆ ಅನ್ಯಾಯ ಮಾಡಿದ್ದಾರೆ ಎಂದು ಮಾತನಾಡುತ್ತಲೇ, ಗಳಗಳನೇ ಅತ್ತರು. ನನ್ನನ್ನು ಎಂ.ಎಲ್.ಎ ಮಾಡ್ತೇನೆ ಎಂದು ನನ್ನ ಪಕ್ಷಕ್ಕೆ ಬಂದು, ನನಗೆ ಮೋಸ ಮಾಡಿದ್ದಾರೆ ಇದಕ್ಕೆಲ್ಲ ಶೋಭಾ ಕರಂದ್ಲಾಜೆ ಅವರೇ ಕಾರಣ ಎಂದು ದೂರಿದರು.

ಇನ್ನು ತಮ್ಮ ಮಾತುಗಳನ್ನು ಮುಂದುವರೆಸಿದ ಪದ್ಮನಾಭ ಪ್ರಸನ್ನ, ಶೋಭಾ ಕರಂದ್ಲಾಜೆ ಅವರಿಂದ ನನಗೆ ಜೀವಬೆದರಿಕೆ ಇದೆ. ನನಗೆ ಜೀವ ಬೆದರಿಕೆ ಇರೋದರಿಂದಲೇ ಮದುವೆ ಸಿಡಿ ಬಿಡುಗಡೆ ಮಾಡುತ್ತಿಲ್ಲ, ನನಗೆ ಸೂಕ್ತ ಭದ್ರತೆ ಒದಗಿಸಿದರೆ ಸಿಡಿ ಬಿಡುಗಡೆ ಮಾಡುವೆ ಎಂದಿದ್ದಾರೆ.  ಅಲ್ಲದೇ ಶಿಕಾರಿಪುರ ಕ್ಷೇತ್ರದಿಂದ ಬಿಎಸ್ ವೈ ವಿರುದ್ಧ ಸ್ಪರ್ಧಿಸುತ್ತೇನೆ ಎಂದು ಸವಾಲೆಸೆದಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Padmanabha Prasanna KJP ಶಿಕಾರಿಪುರ ಬಿಎಸ್ ವೈ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ