ದೆಹಲಿಯಲ್ಲೂ ಟಿಪ್ಪುವಿನ ಸದ್ದು…!27-01-2018

ಕಳೆದ ಎರಡು ವರ್ಷಗಳಿಂದ ಕರ್ನಾಟಕದಲ್ಲಿ ಸಾಕಷ್ಟು ಸುದ್ದಿ ಮತ್ತು ವಿವಾದ ಸೃಷ್ಟಿಸಿದ್ದ ಟಿಪ್ಪು ಸುಲ್ತಾನ್ ವಿಚಾರ ಇದೀಗ ದೆಹಲಿ ತಲುಪಿದೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ದೆಹಲಿ ವಿಧಾನಸಭೆಯಲ್ಲಿ 69 ಜನ ಕ್ರಾಂತಿಕಾರಿಗಳು, ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸಾಧಕರ ಚಿತ್ರಗಳನ್ನು ಅನಾವರಣ ಮಾಡಿದರು. ಆ ಚಿತ್ರಗಳಲ್ಲಿ ಮೈಸೂರಿನ ಹುಲಿ ಅನ್ನಿಸಿಕೊಂಡಿದ್ದ ಟಿಪ್ಪು ಸುಲ್ತಾನ್ ಚಿತ್ರವೂ ಇತ್ತು.

ಟಿಪ್ಪುವಿನ ಚಿತ್ರ ಗುರುತು ಸಿಕ್ಕಿದ್ದೇ ತಡ ಬಿಜೆಪಿ ಶಾಸಕ ಓಂ ಪ್ರಕಾಶ್ ಶರ್ಮ ಆಕ್ಷೇಪಣೆ ವ್ಯಕ್ತಪಡಿಸಿದರು. ಟಿಪ್ಪು ವಿವಾದಾತ್ಮಕ ವ್ಯಕ್ತಿ, ಅಂಥವರ ಚಿತ್ರವನ್ನು ವಿಧಾನಸಭೆಯಲ್ಲಿ ಹಾಕುವುದು ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆದರೆ, ಇವರ ಆಕ್ಷೇಪಣೆಯನ್ನು ತಳ್ಳಿಹಾಕಿದ  ವಿಧಾನಸಭೆಯ ಸ್ಪೀಕರ್ ರಾಮ್ ನಿವಾಸ್ ಗೋಯಲ್, ‘ಬಿಜೆಪಿ ನಾಯಕರು ಎಲ್ಲ ವಿಚಾರಗಳಲ್ಲೂ ವಿವಾದ ಸೃಷ್ಟಿಸಲು ಪ್ರಯತ್ನಿಸುತ್ತಿರುತ್ತಾರೆ’ ಎಂದು ಕುಟುಕಿದರು. ‘ಭಾರತ ಸಂವಿಧಾನದ 144ನೇ ಪುಟದಲ್ಲಿ ಟಿಪ್ಪು ಸುಲ್ತಾನನ ಚಿತ್ರಹಾಕಲಾಗಿದೆ, ಹೀಗೆ ಮಾಡುವ ಮೂಲಕ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು ಮತ್ತು ಸಂವಿಧಾನ ರಚಿಸಿದವರೇನಾದರೂ ದ್ರೋಹ ಮಾಡಿದ್ದಾರೆಯೇ ಅಥವ ಬಿಜೆಪಿಯವರು ಅದನ್ನು ಮಾಡುತ್ತಿದ್ದಾರೆಯೇ?’ ಎಂದು ಸ್ಪೀಕರ್ ಪ್ರಶ್ನಿಸಿದರು. ಒಟ್ಟಿನಲ್ಲಿ, ಸಿದ್ದರಾಮಯ್ಯ ಸರ್ಕಾರ ಕರ್ನಾಟಕದಲ್ಲಿ ಟಿಪ್ಪು ಜಯಂತಿ ಆಚರಿಸಲು ಶುರುಮಾಡಿದ ನಂತರ ಆರಂಭವಾದ ಈ ವಿವಾದ ಮತ್ತೆ ಮತ್ತೆ ಕಿಡಿ ಹೊತ್ತಿಸುತ್ತಿರುವುದಂತೂ ನಿಜ.


ಸಂಬಂಧಿತ ಟ್ಯಾಗ್ಗಳು

kejriwal Tipu Sultan ಸಂವಿಧಾನ ಸ್ಪೀಕರ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ