ವಿಧಾನಸೌಧದಲ್ಲಿಂದು ಸರ್ವ ಪಕ್ಷ ಸಭೆ

All party meeting in Vidhana Soudha

27-01-2018

ಬೆಂಗಳೂರು: ಮಹದಾಯಿ ವಿವಾದ ವಿಚಾರವಾಗಿ ಇಂದು ಸಿಎಂ ನೇತೃತ್ವದಲ್ಲಿ ಸರ್ವ‌ ಪಕ್ಷ ಸಭೆ ವಿಧಾನಸೌಧದಲ್ಲಿ ನಡೆಯಲಿದ್ದು, ಸಭೆಗೆ ವಿಧಾನಸಭೆ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಮತ್ತು ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಹಾಜರಾಗಲಿದ್ದಾರೆ. ಕಳೆದ ಬಾರಿಯ ಸರ್ವ ಪಕ್ಷ ಸಭೆಯಲ್ಲಿ ನಾವು ನಮ್ಮ ಜವಾಬ್ದಾರಿ ನಿರ್ವಹಿಸಿದ್ದೇವೆ ಆದರೆ ಕಾಂಗ್ರೆಸ್ ಮಾತ್ರ ಗೋವಾ ಕಾಂಗ್ರೆಸ್ಸಿಗರನ್ನು ಒಪ್ಪಿಸುವ ಪ್ರಯತ್ನ ನಡೆಸಿಲ್ಲ ಎಂಬ ಅಂಶವನ್ನು ಸಭೆಯಲ್ಲಿ ಮುಂದಿಡಲು ಬಿಜೆಪಿ ತೀರ್ಮಾನಿಸಲಾಗಿದೆ ಎನ್ನಲಾಗಿದೆ.  ಕಾಂಗ್ರೆಸ್ ತನ್ನ ಪ್ರಯತ್ನ ನಡೆಸಿಯೇ ಇಲ್ಲ ಎಂಬುದನ್ನು ದೊಡ್ಡದಾಗಿ ಸಭೆಯಲ್ಲಿ ಬಿಂಬಿಸಲು ಮುಂದಾಗಿರುವ ಬಿಜೆಪಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೂ ಸಭೆಗೆ ಆಹ್ವಾನಿಸಲಾಗಿದೆ ಎಂದು ತಿಳಿದು ಬಂದಿದೆ.


ಸಂಬಂಧಿತ ಟ್ಯಾಗ್ಗಳು

all party Vidhana Soudha ಸರ್ವ‌ ಪಕ್ಷ ಸಭೆ ಮಹದಾಯಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ