ರಾಗಿಮಿಲ್ ನಲ್ಲಿ ಬಾಲಕಿ ಸಾವು

A teen Girl died in ragimill

27-01-2018

ತುಮಕೂರು: ರಾಗಿಮಿಲ್ ನಲ್ಲಿ ಮೆಷಿನ್ ಬೆಲ್ಟ್ಗೆ ಸಿಕ್ಕಿಕೊಂಡು ಬಾಲಕಿಯೊಬ್ಬಳು ಸಾವನ್ನಪ್ಪಿರುವ ದಾರುಣ ಘಟನೆಯು ತುಮಕೂರಿನಲ್ಲಿ ನಡೆದಿದೆ. ಅಮೃತ (12) ಮೃತ ಬಾಲಕಿ. ತುಮಕೂರು ತಾಲ್ಲೂಕಿನ ಚೋಳೆನಹಳ್ಳಿಯಲ್ಲಿ ಈ ದುರ್ಟನೆ ಸಂಭವಿಸಿದೆ. ರಾಗಿಮಿಲ್ ಯಂತ್ರ ಚಾಲನೆಯಲ್ಲಿದ್ದಾಗ, ಪಕ್ಕದಲ್ಲೇ ನಿಂತಿದ್ದ ಬಾಲಕಿ, ಬೆಲ್ಟ್ ಮುಟ್ಟಲು ಹೋಗಿದ್ದು, ಈ ವೇಳೆ ಬೆಲ್ಟ್ಗೆ ಸಿಕ್ಕಿಕೊಂಡು ಗಾಯಗಳಾಗಿ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ತುಮಕೂರಿನ ಗ್ರಾಮಾಂತರ ಪೊಲೀಸ್ ಠಾಣಾ ‌ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಬಾಲಕಿಯನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.


ಸಂಬಂಧಿತ ಟ್ಯಾಗ್ಗಳು

Ragimill death ಬಾಲಕಿ ಗ್ರಾಮಾಂತರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ