ಮಹಾರಾಷ್ಟ್ರದಲ್ಲಿ ರೈಲು ಅಪಘಾತಗಳು ಹೆಚ್ಚು..!

Train Accidents: NCRB report says maharashtra 1st place

27-01-2018

ಬೆಂಗಳೂರು: ದೇಶದ ಕೋಟ್ಯಾಂತರ ಮಂದಿಯ ಜೀವನಾಡಿಯಾಗಿರುವ ರೈಲು ಹಳಿಗಳ ಮೇಲೆ ಸಂಭವಿಸುವ ಪ್ರತಿವರ್ಷ ಹೆಚ್ಚುತ್ತಲ್ಲೇ ಇದ್ದು ರಾಜ್ಯದಲ್ಲಿ ಪ್ರತಿನಿತ್ಯ ಸರಾಸರಿ ನಾಲ್ವರು ರೈಲು ಹಳಿಗಳ ಮೇಲೆಯೇ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಕಳೆದ 2017ರಲ್ಲಿ ರಾಜ್ಯದಲ್ಲಿ ರೈಲು ಹಳಿಗಳ ಮೇಲೆ 1627 ಮಂದಿ ಅಸುನೀಗಿದ್ದಾರೆ. ಕಳೆದ 12 ತಿಂಗಳಲ್ಲಿ ರೈಲು ಹಳಿ ಹಾದು ಹೋಗಿರುವ ರಸ್ತೆ ದಾಟುವಾಗ 654 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಂಕಿ ಅಂಶಗಳು ಹೇಳುತ್ತಿವೆ.

ಅವರಲ್ಲಿ 545 ಪುರುಷರು ಹಾಗೂ 10 ಮಹಿಳೆಯರಿದ್ದಾರೆ. 498 ಪುರುಷರು ಹಾಗೂ 98 ಮಹಿಳೆಯರು ಆತ್ಮಹತ್ಯೆಗೆ ಶರಣಾಗಿದ್ದಾರೆ. ರೈಲು ಪ್ರಯಾಣದ ವೇಳೆ ಹೃದಯಾಘಾತ ಇನ್ನಿತರ ಕಾರಣಕ್ಕೆ 377 ಮಂದಿ ಸಾವನ್ನಪ್ಪಿರುವುದು ರಾಜ್ಯ ರೈಲ್ವೆ ಅಪರಾಧ ದಾಖಲಾತಿ (ಎನ್‍ಸಿಆರ್‍ಬಿ) ವಿಭಾಗದ ಅಂಕಿ-ಅಂಶಗಳಿಂದ ಬಹಿರಂಗವಾಗಿದೆ.

ಚಲಿಸುವ ರೈಲುಗಳಿಗೆ ಸಿಕ್ಕಿ ಹಳಿಗಳ ಮೇಲೆ ಪ್ರಾಣ ಚೆಲ್ಲುವವರು ಒಂದೆಡೆಯಾದರೆ ಸುರಕ್ಷತಾ ಕ್ರಮ ಇಲ್ಲದಿರುವುದು ಹಾಗೂ ಸ್ವಯಂಕೃತ ಲೋಪಗಳು ಸಾವಿನ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ. ಹಳ್ಳಿ ಹಾಗೂ ನಗರ ಪ್ರದೇಶದಲ್ಲಿ ರೈಲ್ವೆ ಗೇಟ್ ನಿರ್ಮಿಸದಿರುವುದು. ಜನರಿಗೆ ರೈಲು ಹಾದು ಹೋಗುವ ಬಗ್ಗೆ ಸೂಕ್ತ ಮಾಹಿತಿ ಇಲ್ಲದಿರುವುದು. ರೈಲು ಬರುವ ಮಾಹಿತಿ ಒದಗಿಸಲು ಸಮರ್ಪಕ ಸಿಗ್ನಲಿಂಗ್ ವ್ಯವಸ್ಥೆ ಇಲ್ಲದಿರುವುದು ಹಾಗೂ ಆಕಸ್ಮಿಕ ಅಪಘಾತಗಳ ಕುರಿತು ಪ್ರಯಾಣಿಕರಲ್ಲಿ ಜಾಗೃತಿ ಮೂಡಿಸದಿರುವುದು ಅಪಘಾತಕ್ಕೆ ಕಾರಣವಾಗಿದೆ.

ಮುಂಜಾಗ್ರತಾ ಕ್ರಮ: ಹೆಚ್ಚು ಅಪಘಾತ ನಡೆಯುವ ಜಾಗದಲ್ಲಿ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು. ನಾಗರಿಕರು ಹಳಿ ದಾಟುವ ಪ್ರದೇಶಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸಬೇಕು. ರೈಲು ಹಳಿಗಳ ಮೇಲೆ ಓಡಾಡುವವರ ನಿಯಂತ್ರಣಕ್ಕೆ ಪ್ರತ್ಯೇಕ ಸಿಬ್ಬಂದಿ ನೇಮಿಸಬೇಕು. ಹೆಚ್ಚು ಜನರು ರೈಲು ಹಳಿ ದಾಟುವ ಪ್ರದೇಶದಲ್ಲಿ ಮೇಲ್ಸೇತುವೆ, ಸ್ಕೈವಾಕ್ ನಿರ್ಮಿಸಬೇಕು ಮತ್ತು ಪ್ರತಿ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಸೂಚನಾ ಫಲಕ ಹಾಕಬೇಕು ಎಂಬುದು ರೈಲ್ವೆ ಇಲಾಖೆಯ ಕಟ್ಟುನಿಟ್ಟಿನ ಸೂಚನೆಯಾಗಿದೆ.

ದೇಶದಲ್ಲಿ ರೈಲು ಅಪಘಾತ, ಹಳಿ ದಾಟುವಾಗ 2015ರಲ್ಲಿ 26,066 ಮಂದಿ ಅಸುನೀಗಿದ್ದರು. ಮಹಾರಾಷ್ಟ್ರ (4,719) ಮೊದಲ ಸ್ಥಾನದಲ್ಲಿದ್ದರೆ, ಉತ್ತರ ಪ್ರದೇಶ(4,472) ಮತ್ತು ಪಶ್ಚಿಮ ಬಂಗಾಳ(2,545) 2 ಮತ್ತು 3ನೇ ಸ್ಥಾನದಲ್ಲಿವೆ. ಕರ್ನಾಟಕದಲ್ಲಿ 890 ಮಂದಿ ಮೃತಪಟ್ಟಿದ್ದು,12ನೇ ಸ್ಥಾನದಲ್ಲಿದೆ ಎಂದು ಎನ್‍ಸಿಆರ್‍ಬಿ ದಾಖಲೆ ಹೇಳುತ್ತದೆ.

 

 


ಸಂಬಂಧಿತ ಟ್ಯಾಗ್ಗಳು

Train Accident ಎನ್‍ಸಿಆರ್‍ಬಿ ಅಪಘಾತ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ