ಪದ್ಮಾವತ್ ಸಿನೆಮಾ ಹೆಂಗಿದೆ ಗೊತ್ತಾ?25-01-2018

ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ರಜಪೂತ ಸಮುದಾಯದವರಿಂದ ತೀವ್ರ ಪ್ರತಿಭಟನೆ ಎದುರಿಸಿ ವಿವಾದಕ್ಕೆ ಕಾರಣವಾಗಿದ್ದ 'ಪದ್ಮಾವತ್' ಸಿನೆಮಾ ಬೆಳ್ಳಿ ತೆರೆ ಮೇಲೆ ಕಾಣಿಸಿಕೊಂಡಿದೆ. ಮಹಮದ್ ಜಯಾಸಿ ಎಂಬವರ ಕಾವ್ಯವನ್ನು ಆಧರಿಸಿರುವ ಈ ಸಿನೆಮಾವನ್ನು 190 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಸಂಜಯ್ ಲೀಲಾ ಭನ್ಸಾಲಿ ನಿರ್ದೇಶಿಸಿ ಸಂಗೀತ ನೀಡಿರುವ ಈ ಸಿನೆಮಾದಲ್ಲಿ ಕನ್ನಡತಿ ದೀಪಿಕಾ ಪಡುಕೋಣೆ ಜೊತೆಗೆ ರಣ್‌ವೀರ್ ಸಿಂಗ್, ಶಾಹಿದ್ ಕಪೂರ್ ಮತ್ತು ಅದಿತಿ ರಾವ್ ಹೈದರಿ ಮುಖ್ಯ ತಾರಾಗಣದಲ್ಲಿದ್ದಾರೆ. ಉತ್ತಮ ಛಾಯಾಗ್ರಹಣ, ಉಡುಪು ವಿನ್ಯಾಸ, ಮನಸೆಳೆಯುವ ಸೆಟ್‌ಗಳು ಮತ್ತು ಆಕ್ಷನ್ ಸೀನ್‌ಗಳನ್ನು ಹೊಂದಿರುವ ಪದ್ಮಾವತ್ ಸಿನೆಮಾ 13ನೇ ಶತಮಾನದ ಕಥಾನಕವನ್ನು ಸುಂದರವಾಗಿ ಮೂಡಿಸಿದೆ.  

ನಟ ರಣ್‌ವೀರ್ ಸಿಂಗ್ ಅಲ್ಲಾವುದ್ದೀನ್ ಖಿಲ್ಜಿ ಪಾತ್ರದಲ್ಲಿ ಪಾತ್ರದಲ್ಲಿ ಮಿಂಚಿದ್ದು, ಘೂಮರ್ ಹಾಡಂತೂ ಚಿತ್ರರಸಿಕರ ಮನಸೂರೆಗೊಳ್ಳುತ್ತಿದೆ. ಆದರೆ, ಕೆಲವು ಕಡೆ ಬೋರಿಂಗ್ ಅನ್ನಿಸುವ ಪದ್ಮಾವತ್ ಸಿನೆಮಾದಲ್ಲಿ ಭಾವನಾತ್ಮಕ ದೃಶ್ಯಗಳೇ ಇಲ್ಲ ಮತ್ತು ಸಂಭಾಷಣೆ ಹಾಗೂ ಚಿತ್ರಕಥೆ ಸಾಧಾರಣ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ರಾಜಾ ರತನ್ ಸಿಂಗ್ ಪಾತ್ರ ಮಾಡಿರುವ ಶಾಹಿದ್ ಕಪೂರ್ ರಜಪೂತ್ ದೊರೆಯಂತೆ ಕಾಣುವುದೇ ಇಲ್ಲ, ದೀಪಿಕಾ ಪಡುಕೋಣೆ ತುಂಬಾ ಸುಂದರವಾಗಿ ಕಾಣಿಸಿಕೊಂಡರೂ ಕೂಡ ನಿರಾಸೆಗೊಳಿಸುತ್ತಾರೆ. ಎರಡೂ ಮುಕ್ಕಾಲು ಗಂಟೆಯ ಸಿನೆಮಾವನ್ನು ಬಿಗಿಯಾಗಿ ಎಡಿಟ್ ಮಾಡಿದ್ದರೆ ಕನಿಷ್ಟ ಅರ್ಧಗಂಟೆ ಕಡಿತಗೊಳಿಸಬಹುದಿತ್ತು ಮತ್ತು ಸಿನೆಮಾದ ಕ್ಲೈಮ್ಯಾಕ್ಸ್ ದೃಶ್ಯ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ವಿಫಲವಾಗಿದೆ ಎನ್ನುವುದು ವಿಮರ್ಶಕರ ಟೀಕೆ, ಇವೆಲ್ಲಾ ಕಾರಣಗಳಿಂದ ಪದ್ಮಾವತ್ ಸಿನೆಮಾ ಒಂದು ಎಕ್ಸ್‌ಟ್ರಾ ಆರ್ಡಿನರಿ ಸಿನೆಮಾ ಅನ್ನುವುದಕ್ಕಿಂತ, ಹಲವಾರು ಎಕ್ಸ್‌ಟ್ರಾಗಳಿರುವ ಒಂದು ಆರ್ಡಿನರಿ ಸಿನೆಮಾ ಅನ್ನುವುದು ವಿಮರ್ಶಕ ಅನೀಸ್ ಮೊರಾಬ್ ಅಭಿಪ್ರಾಯ. ಹೀಗಿದ್ದರೂ ಕೂಡ, ಈ ಸಿನೆಮಾ ಬಾಕ್ಸ್ ಆಫೀಸಿನಲ್ಲಿ ಉತ್ತಮ ಸಾಧನೆ ಮಾಡುವ ತಾಕತ್ ಹೊಂದಿದ್ದು ಮೊದಲ ದಿನದ ಗಳಿಕೆಯೇ 25ರಿಂದ 30 ಕೋಟಿ ರೂಪಾಯಿ ದಾಟಬಹುದು ಎಂದು ಅಂದಾಜಿಸಲಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ