'ಕಾಂಗ್ರೆಸ್ ತೊರೆದ 20 ಮಂದಿ ಜೆಡಿಎಸ್ ಗೆ'25-01-2018

ಬೆಂಗಳೂರು: ರಾಜ್ಯದಲ್ಲಿ ದಿನೆ ದಿನೆ ಚುನಾಣಾ ಕಾವು ಹೆಚ್ಚಾಗುತ್ತಿದ್ದು, ಪಕ್ಷಾಂತ ಪರ್ವಗಳು ಜೋರಾಗೇ ನಡೆಯುತ್ತಿವೆ. ಅದರಂತೆ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಜೆಡಿಎಸ್ ಸೇರ್ಪಡೆಯಾಗಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ, ಬೆಂಗಳೂರಿನ ಜೆ.ಪಿ.ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಳಗಾವಿಯ 20 ಮಂದಿ ಕಾಂಗ್ರೆಸ್ಸಿಗರು, ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ. ಜಿ.ಪಂಚಾಯತ್ ಮಾಜಿ ಸದಸ್ಯ ಬಸವರಾಜ್ ಮೇಳೇದ್, ಎಪಿಎಂಸಿ ಮಾಜಿ ಅಧ್ಯಕ್ಷ ಸೇರಿದಂತೆ ಇನ್ನಿತರರು ಸೇರ್ಪಡೆಗೊಂಡರು.

ಸೇರ್ಪಡೆ ಕಾರ್ಯಕ್ರಮದ ನಂತರ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರು, ಬೆಳಗಾವಿಯಿಂದ ಹಲವು ಮುಖಂಡರು ಜೆಡಿಎಸ್ ಸೇರಿದ್ದಾರೆ. ಅಲ್ಲದೇ ಬೆಳಗಾವಿ ಜಿಲ್ಲೆಯಲ್ಲಿ ಮುಂದಿನ ತಿಂಗಳು ಬಹಳಷ್ಟು‌ ಬದಲಾವಣೆಯಾಗಲಿದೆ ಎಂದರು. ಎರಡು ರಾಷ್ಟ್ರೀಯ ಪಕ್ಷಗಳ ಕೃಷಿ ವಿರೋಧಿ ನೀತಿಯಿಂದ ಬೆಳಗಾವಿ‌ ಭಾಗದ ಜನ‌ ಬೇಸತ್ತಿದ್ದಾರೆ ಎಂದು ಆರೋಪಿಸಿದರು. ಇವತ್ತು ಸೇರ್ಪಡೆಗೊಂಡ ಮುಖಂಡರು ಯಾವುದೇ ಸ್ಥಾನಮಾನಕ್ಕಾಗಿ ಪಕ್ಷ ಸೇರಿಲ್ಲ, ಎರಡನೇ ಹಂತದ ನಾಯಕರು ಪಕ್ಷ ಸೇರಿದ್ದು, ಜೆಡಿಎಸ್ ಅನ್ನು ಇನ್ನಷ್ಟು ಬಲಪಡಿಸಲಿದ್ದಾರೆ, ಪಕ್ಷಕ್ಕೆ ಇವರೆಲ್ಲ ಭದ್ರ ಬುನಾದಿ ಹಾಕುತ್ತಾರೆ ಅನ್ನೋ ವಿಶ್ವಾಸವಿದೆ ಎಂದು ನುಡಿದರು.


ಸಂಬಂಧಿತ ಟ್ಯಾಗ್ಗಳು

H.D.Kumaraswamy Defection ಜೆ.ಪಿ.ಭವನ ಪಂಚಾಯತ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


Jai jds jai hdk jai karnataka
  • Ramesh Gowda
  • Bizines
JDS 117 Seats winner in 2018
  • Yash
  • Business
Jai Hdk Jai Jds
  • Shivaram
  • Ofc Airtel
ಕಾಫಿ ವಿತ್ ಕುಮಾರಣ್ಣ, ಕರುನಾಡಿಗೆ ಕುಮಾರಣ್ಣ,
  • Sunilgowda
  • Executive hr
Karnataka next govt jds kumaranna ples saport Karnataka all public jds
  • J d s hext
  • S S