ಟ್ರ್ಯಾಕ್ಟರ್ ಪಲ್ಟಿ 30 ಜನರಿಗೆ ಗಾಯ, ಇಬ್ಬರ ಸ್ಥಿತಿ ಚಿಂತಾಜನಕ..

Kannada News

24-04-2017

ರಾಯಚೂರಿನ ಮಾನ್ವಿ ತಾಲೂಕಿನ ಆನಂದಗಲ್ ಬಳಿ ನವದಂಪತಿಗಳ ಜೊತೆ ದೇವಸ್ಥಾನಕ್ಕೆ ಹೋರಟಿದ್ದ ವೇಳೆ ಟ್ರ್ಯಾಕ್ಟರ್ ಪಲ್ಟಿ ಹೊಡೆದಿದೆ. ರಾಮಲದಿನ್ನಿಯಿಂದ ಲಿಂಗಸುಗೂರಿನ ಗುರುಗುಂಟಾ ಅಮರೇಶ್ವರಕ್ಕೆ ಹೊರಟಿದ್ದ ಟ್ರ್ಯಾಕ್ಟರ್  ಪಲ್ಟಿ ಹೊಡೆದ ಪರಿಣಾಮ 30 ಜನರಿಗೆ ಗಾಯವಾಗಿದ್ದು ಯಂಕಮ್ಮ, ಅಂಬಮ್ಮ ಎಂಬುವವರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಕವಿತಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಈ ಘಟನೆ ಕವಿತಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ.

Links :



ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ