ರೈಲುಗಳಲ್ಲಿ ಕ್ಯಾಮರಾ ಕಣ್ಣು…

All trains under CCTV ...?

25-01-2018

ಪ್ರಯಾಣಿಕರ ಸುರಕ್ಷತೆಗಾಗಿ ರೈಲ್ವೆ ಇಲಾಖೆ 11 ಸಾವಿರ ರೈಲುಗಳಲ್ಲಿ 12 ಲಕ್ಷ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಿದೆ. ಇದಕ್ಕಾಗಿ ಮುಂಬರುವ ಕೇಂದ್ರ ಬಜೆಟ್‌ನಲ್ಲಿ 3 ಸಾವಿರ ಕೋಟಿ ರೂಪಾಯಿಗಳನ್ನು ನಿಗದಿಪಡಿಸುವ ಸಾಧ್ಯತೆ ಇದೆ. ರೈಲುಗಳು ಮಾತ್ರವಲ್ಲದೆ ದೇಶದ ಉದ್ದಗಲಕ್ಕೂ ಇರುವ 8500 ರೈಲು ನಿಲ್ದಾಣಗಳಲ್ಲೂ ಸಿಸಿಟಿವಿ ಕಣ್ಗಾವಲು ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ.

ರೈಲಿನ ಪ್ರತಿಯೊಂದು ಬೋಗಿಯಲ್ಲೂ 8 ಸಿಸಿಟಿವಿ ಕ್ಯಾಮರಾಗಳನ್ನು ಅಳಡಿಸಲಾಗುಗುವುದು, ಇವು ಬೋಗಿಯ ಒಳಗಿನ ದೃಶ್ಯಗಳ ಜೊತೆಗೆ ಬಾಗಿಲು ಮತ್ತು ಹತ್ತಿ ಇಳಿಯುವವರ ದೃಶ್ಯಾವಳಿಗಳನ್ನೂ ದಾಖಲಿಸಿಕೊಳ್ಳುತ್ತವೆ. ರೈಲ್ವೆ ನಿಲ್ದಾಣಗಳಲ್ಲಿನ ನಿರ್ಜನ ಪ್ರದೇಶಗಳಲ್ಲೂ ಕ್ಯಾಮರಾ ಅಳವಡಿಸಲಾಗುತ್ತದೆ. ಈ ಎಲ್ಲ ಕ್ಯಾಮರಾಗಳಲ್ಲಿ ದಾಖಲಾಗುವ ದೃಶ್ಯಗಳನ್ನು ತರಬೇತಿ ಪಡೆದ ಸಿಬ್ಬಂದಿ ಮತ್ತು ಆರ್‌ಪಿಎಫ್ ಅಂದರೆ ರೈಲ್ವೆ ರಕ್ಷಣಾ ದಳದವರು  ದಿನದ 24 ಗಂಟೆಯೂ ನಿಗಾಮಾಡಲಿದ್ದಾರೆ. ಸ್ಟೇಷನ್ ಮಾಸ್ಟರ್‌ಗಳೂ ಕೂಡ ಸಿಸಿಟಿವಿಯ ದೃಶ್ಯಾವಳಿಗಳನ್ನು ನೋಡಬಹುದಾಗಿದೆ.

ಪ್ರಯಾಣಿಕರ ಅದರಲ್ಲೂ ಮಹಿಳಾ ಪ್ರಯಾಣಿಕರು ಮತ್ತು ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಸಿಸಿಟಿವಿ ಕ್ಯಾಮರಾಗಳ ಅಳವಡಿಕೆ ಸರಿಯಾದ ಕ್ರಮ. ಆದರೆ, ಇಲ್ಲಿ ಪ್ರಯಾಣಿಕರ ಖಾಸಗಿತನದ ಪ್ರಶ್ನೆಯೂ ಉದ್ಭವಾಗುತ್ತದೆ. ಹೀಗಾಗಿ, ಯಾವುದೇ ಕಾರಣಕ್ಕೂ ಪ್ರಯಾಣಿಕರ ಖಾಸಗಿತನಕ್ಕೆ ಧಕ್ಕೆಯಾಗದ ರೀತಿಯ ವ್ಯವಸ್ಥೆ ಮಾಡಬೇಕಾಗಿದೆ. ಇಲ್ಲವಾದರೆ, ಕ್ಯಾಮರಾ ಅಳವಡಿಕೆ ವಿಚಾರ ಮತ್ತೊಂದು ಬಗೆಯ ಸಮಸ್ಯೆಗಳ ಸೃಷ್ಟಿಗೆ ಕಾರಣವಾಗಬಹುದು.


ಸಂಬಂಧಿತ ಟ್ಯಾಗ್ಗಳು

CCTV Train ಪ್ರಯಾಣಿಕ ಖಾಸಗಿತನ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ