'ದೇವೇಗೌಡರಿಗೆ ಪಿಎಂ ಕುರ್ಚಿ ಕೊಟ್ಟಿದ್ದು ಕಾಂಗ್ರೆಸ್'

A.manju v/s Hd devegowda

25-01-2018

ಹಾಸನ: ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ಸಚಿವ ಎ.ಮಂಜು ಸಿಡಿಮಿಡಿಗೊಂಡಿದ್ದಾರೆ. ಹಾಸನದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡರಿಗೆ ವಯಸ್ಸಾಗಿದೆ, ಅದಕ್ಕೆ ಏನೇನೋ ಮಾತನಾಡುತ್ತಾರೆ. ನಾನು 7ನೇ ಕ್ಲಾಸನ್ನೇ 7 ಸಾರಿ ಫೇಲ್ ಆಗಿ ಅವರ ಥರಾ ಮಂತ್ರಿ ಆದವನು ಅಲ್ಲ. ನಮ್ಮ ಅಪ್ಪ ನನ್ನ ಡಬಲ್ ಡಿಗ್ರಿ ಮಾಡಿಸಿದ್ದಾರೆ ಎಂದು ಕಟುವಾಗಿ ಟೀಕೆ ಮಾಡಿದ್ದಾರೆ. ನಾನು ಯಾರದೋ ಕೃಪಾಕಟಾಕ್ಷದಿಂದ ಮಂತ್ರಿಯಾಗಿಲ್ಲ. ದೇವೇಗೌಡರು ಯಾರ ಸಹಾಯದಿಂದ ಸಂಸದರಾದ್ರು ಅಂತಾ ಹೇಳಲಿ, ಅವರು ಸೋತು ಮನೆಯಲ್ಲಿ ಕುಳಿತಿದ್ದಾಗ ನನ್ನ ಹತ್ತಿರ ಸಹಾಯ ಕೇಳಿಕೊಂಡು ಬಂದಿದ್ದರು, ದೇವೇಗೌಡರಿಗೆ ಪಿಎಂ ಕುರ್ಚಿ ಕೊಟ್ಟಿದ್ದು ಕಾಂಗ್ರೆಸ್ ಪಕ್ಷ ಎಂದು ಹೇಳಿದ್ದಾರೆ.

ದೇವೇಗೌಡರು ವಯಸ್ಸಿಗೆ ತಕ್ಕಂಗೆ ಮಾತನಾಡಲಿ, ಅವರು ಮಕ್ಕಳ ವ್ಯಾಮೋಹ ಮೊದಲು ಬಿಡಲಿ. ಏಕೆ ಡಿಸಿ ಬದಲಾವಣೆ ಮಾಡಿದ್ರು ಅನ್ನೋದನ್ನ ಕೆಲವೇ ದಿನದಲ್ಲಿ ಬಹಿರಂಗಪಡಿಸುತ್ತೇನೆ ನಾನು ಅವರ ಹಂಗಲ್ಲಿ ಇಲ್ಲ, ನನ್ನ ಹಂಗಲ್ಲಿ ಅವರು ಇದ್ದಾರೆ ಎಂದು ಕಿಡಿಕಾರಿದರು.


ಸಂಬಂಧಿತ ಟ್ಯಾಗ್ಗಳು

A.Manju H.D.Deve Gowda ಸಿಡಿಮಿಡಿ ಕೃಪಾಕಟಾಕ್ಷ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ