ಬೀದರ್ ನಲ್ಲಿ ಯಾವುದೇ ಬಂದ್ ಇಲ್ಲ..!

No bandh in bidar...!

25-01-2018

ಬೀದರ್: ಮಹದಾಯಿ ನೀರಿಗಾಗಿ ಇಂದು ಕನ್ನಡ ಸಂಘಟನೆಗಳು ಕರ್ನಾಟಕ ಬಂದ್ ಗೆ ಕರೆ ನೀಡಿದ್ದು, ಆದರೆ ಬೀದರ್ ಜಿಲ್ಲೆಯಲ್ಲಿ ಯಾವುದೇ ಬಂದ್ ಇಲ್ಲ. ಸರಕಾರಿ ಬಸ್ಗಳು ಹಾಗು ಖಾಸಗಿ ಬಸ್ ಮತ್ತು ಆಟೋ ಸಂಚಾರ ಎಂದಿನಂತಿದ್ದು, ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ. ಇನ್ನು ಹೋಟೆಲ್-ಅಂಗಡಿ ಮುಂಗಟ್ಟುಗಳು ಪ್ರತಿನಿತ್ಯದಂತೆ ವ್ಯಾಪಾರದಲ್ಲಿ ತೊಡಗಿಕೊಂಡಿವೆ. ರೈತ ಸಂಘಟನೆ, ಕರವೇ ಸೇರಿದಂತೆ ಇನ್ನಿತರ ಸಂಘಟನೆಗಳಿಂದ ಮಹದಾಯಿ ಹೋರಾಟಕ್ಕೆ ಮಾತ್ರ ಬೆಂಬಲ ನೀಡುವುದಾಗಿ, ಮತ್ತು ಬಂದ್ ಬೆಂಬಲವಿಲ್ಲ ಎಂಬಂತಿವೆ. ಶಾಲಾ-ಕಾಲೇಜುಗಳಿಗೂ ರಜೆ ನೀಡದಿದ್ದು, ಬೀದರ್ ನಲ್ಲಿ ಜನಜೀವನ ಎಂದಿನಂತಿದೆ.


ಸಂಬಂಧಿತ ಟ್ಯಾಗ್ಗಳು

Bandh hotels ಮಹದಾಯಿ ಪ್ರತಿನಿತ್ಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ