ಖ್ಯಾತ ಚಲನಚಿತ್ರ ನಿರ್ದೇಶಕ ಪುಟ್ಟಣ ಕಣಗಾಲ್ ನಿವಾಸದಲ್ಲಿ ಕಳ್ಳತನ

Kannada News

24-04-2017

ಮೈಸೂರು: ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ಕಣಗಾಲ್ ಗ್ರಾಮದಲ್ಲಿ ಕಳ್ಳತನ ನಡೆದಿದೆ. ಭಾನುವಾರ ರಾತ್ರಿ ಮನೆಯ ಹಿಂಭಾಗದ ಗೋಡೆ ಕೊರೆದು ಕಳ್ಳರು ಒಳನುಗ್ಗಿದ್ದಾರೆ. ಮನೆಯಲ್ಲಿದ್ದ ಕಂಚಿನ ಅಂಡೆ, ಹಾಗೂ ಕೆಲ ಪುಸ್ತಕಗಳನ್ನು ಕದ್ದೊಯ್ದಿದ್ದಾರೆ. ಕಣಗಾಲ್ ಗ್ರಾಮದಲ್ಲಿರುವ ಪುಟ್ಟಣಕಣಗಾಲ್ ಅವರ ಹಳೆಯ ನಿವಾಸದಲ್ಲಿ ಹಲವು ವರ್ಷಗಳಿಂದ ಯಾರು ವಾಸವಿಲ್ಲ. ಈ ಘಟನೆ ಬಗ್ಗೆ ಯಾರು ಸಹ ದೂರು ನೀಡಿಲ್ಲ. ಈ ಪ್ರಕರಣ ಹಿನ್ನೆಲೆ ಬೆಟ್ಟದಪುರ ಠಾಣೆ ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Links :ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ