ಎಂದಿನಂತಿರುವ ವಿಜಯಪುರ ಜಿಲ್ಲೆ...!

karnataka Bandh: vijayapura district as usual

25-01-2018

ವಿಜಯಪುರ: ಮಹದಾಯಿ ಹೋರಾಟಕ್ಕೆ ಕನ್ನಡಪರ ಸಂಘಟನೆಗಳು ಬೆಂಬಲಿಸಿ ಕರೆ ನೀಡಿರುವ ಕರ್ನಾಟಕ ಬಂದ್ ಹಿನ್ನೆಲೆ, ವಿಜಯಪುರ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಂದಿನಂತೆ ಸಂಚಾರ ಆರಂಭವಾಗಿದ್ದು, ಸರಕಾರಿ ಮತ್ತು ಖಾಸಗಿ ಬಸ್ ಹಾಗು ಆಟೋಗಳು ನಗರದದ ರಸ್ತೆಗಳಲ್ಲಿ ಸಂಚರಿಸುತ್ತಿವೆ. ಬಂದ್ಗೆ ಹೊಟೇಲ್ ಮತ್ತು ವ್ಯಾಪಾರ ವಹಿವಾಟು ಸಂಘಟನೆಗಳು ಬೆಂಬಲ ನೀಡದಿದ್ದು, ಹೋಟೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ.

ಕರವೇ ಸೇರಿದಂತೆ ಇನ್ನಿತರ ಸಂಘಟನೆಗಳು ಮಾತ್ರ ಮಹದಾಯಿ ಹೋರಾಟಕ್ಕೆ ಬೆಂಬಲಿಸಿದ್ದು, ಜಿಲ್ಲೆಯ ಸಿಂದಗಿ, ಮುದ್ದೇಬಿಹಾಳ, ತಾಳಿಕೋಟೆ ಇಂಡಿ ತಾಲ್ಲೂಕುಗಳಲ್ಲೂ ಕೂಡ ಕರ್ನಾಟಕ ಬಂದ್ ಗೆ ಬೆಂಬಲ ವ್ಯಕ್ತವಾಗಿಲ್ಲ, ಜನ ಜೀವನ ಎಂದಿನಂತಿದೆ.


ಸಂಬಂಧಿತ ಟ್ಯಾಗ್ಗಳು

karnataka Baandh vijayapura ಬೆಂಬಲ ಆಟೋಗಳು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ