ನಿಧಾನವಾಗಿ ಚಟುವಟಿಕೆಯತ್ತ ಮೈಸೂರು

karnataka bandh: slowly vehicles, market activities started

25-01-2018

ಮೈಸೂರು: ಮಹದಾಯಿ ಹೋರಾಟ ಬೆಂಬಲಿಸಿ ಕರ್ನಾಟಕ ಬಂದ್ ಹಿನ್ನೆಲೆ, ಮೈಸೂರಿನಲ್ಲಿ ಮುಂಜಾನೆಯೇ ಬೀದಿಗಿಳಿದ ಕನ್ನಡ ಚಳವಳಿಗಾರರ ವೇದಿಕೆ ಕಾರ್ಯಕರ್ತರು, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟಿಸಿದರು.

ಇನ್ನು ಇದೀಗ ಮೈಸೂರಿನಲ್ಲಿ ನಿಧಾನವಾಗಿ ಮಾರುಕಟ್ಟೆ ಚಟುವಟಿಕೆಗಳು ಆರಂಭವಾಗಿದ್ದು, ದಿನ ಬಳಕೆ, ಗೃಹೋಪಯೋಗಿ ವಸ್ತುಗಳು ಲಭ್ಯವಾಗುತ್ತಿವೆ. ವಾಹನಗಳು ಸಹ ನಿಧಾನವಾಗಿ ರಸ್ತೆಗಿಳಿಯುತ್ತಿದ್ದು, ಸಂಚಾರ ಆರಂಭಗೊಂಡಿದೆ. ಆದರೆ ಕೆ.ಎಸ್.ಆರ್.ಟಿ.ಸಿ.ಬಸ್ ಗಳು ರಸ್ತೆಗಿಳಿದಿಲ್ಲ. ನಗರ, ಗ್ರಾಮಾಂತರ ವಿಭಾಗದ ಬಸ್ಗಳು ಎಂದಿನಂತಿವೆ. ರೈಲು ಸಹ ಎಂದಿನಂತೆ ಸಂಚಾರ  ಆರಂಭಿಸಿದೆ. ಆದರೂ ಪ್ರಯಾಣಿಕರ ಸಂಖ್ಯೆ ಕಡಿಮೆ ಇದ್ದು, ರೈಲು ಬೋಗಿಗಳು ಖಾಲಿ ಖಾಲಿಯಾಗಿವೆ. ಸಾಮಾನ್ಯ ದಿನಗಳಲ್ಲಿ ಬೆಂಗಳೂರು-ಮೈಸೂರು ರೈಲುಗಳು ಭರ್ತಿಯಾಗಿರುತ್ತಿದ್ದವು, ಬಂದ್ ಹಿನ್ನೆಲೆಯಲ್ಲಿ ಜನ ಸಂಚಾರ ವಿರಳವಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ