ಬೆಂಗಳೂರು ವಿವಿ ಪರೀಕ್ಷೆಗಳು ಮುಂದೂಡಿಕೆ...!

Bangalore University reschedules exams

24-01-2018

ಬೆಂಗಳೂರು: ಕರ್ನಾಟಕ ಬಂದ್ ಹಿನ್ನೆಲೆ ಬೆಂಗಳೂರು ವಿಶ್ವವಿದ್ಯಾಲಯದ ಮೊದಲನೇ ಹಾಗೂ 3ನೇ ಸೆಮಿಸ್ಟರ್ ಬಿಎ, ಬಿಎಸ್ಸಿ, ಬಿಕಾಂ, ಬಿಬಿಎಂ ಮತ್ತು ಎರಡನೇ ವರ್ಷದ ಎಂ.ಎ ಹಾಗೂ ಎಂ.ಕಾಂ, ಎಂಎಸ್ಸಿ ಮತ್ತು ಪಿಜಿ ಕೋರ್ಸ್ ಗಳ ಪರೀಕ್ಷೆಗಳನ್ನು ಮುಂದೂಡಲಾಗಿದೆ.

ಮೊದಲನೆ ಬಿಎ, ಬಿಎಸ್ಸಿ, ಬಿಕಾಂ, ಬಿಬಿಎಂ ಪರೀಕ್ಷೆಗಳು ಫೆಬ್ರವರಿ 8ಕ್ಕೆ ನಡೆಯಲಿವೆ, 3ನೇ ವರ್ಷದ ಬಿಎ, ಬಿಎಸ್ಸಿ ಫೆಬ್ರವರಿ 5ಕ್ಕೆ ನಡೆಯಲಿವೆ. 3ನೇ ವರ್ಷದ ಬಿಕಾಂ, ಬಿಬಿಎಂ ಜನವರಿ 31ಕ್ಕೆ ನಡೆಯಲಿದೆ. 2ನೇ ವರ್ಷದ ಎಂಎ, ಎಂಎಸ್ಸಿ ಫೆಬ್ರುವರಿ 2ಕ್ಕೆ ನಡಿಯಲಿದೆ ಮತ್ತು 2ನೇ ವರ್ಷದ ಎಂಕಾಂ ಪರೀಕ್ಷೆಗಳು ಫೆಬ್ರವರಿ 8ಕ್ಕೆ ನಡೆಯಲಿದ್ದು, ಪಿ.ಜಿ ಡಿಪ್ಲೊಮಾ ಕೋರ್ಸ್‌ ಗಳ ಪರೀಕ್ಷೆಗಳು ಜನವರಿ 31ಕ್ಕೆ ನಡೆಯಲಿವೆ ಎಂದು ತಿಳಿದು ಬಂದಿದೆ.


ಸಂಬಂಧಿತ ಟ್ಯಾಗ್ಗಳು

university exams ಡಿಪ್ಲೊಮಾ ಕೋರ್ಸ್‌


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ