ಕರ್ನಾಟಕ ಬಂದ್ ಗೆ ಭಿನ್ನ ರಾಗ...!

karnataka badh: protest against bandh

24-01-2018

ಬೆಂಗಳೂರು: ನಾಳಿನ ಕರ್ನಾಟಕ ಬಂದ್ಗೆ ಕನ್ನಡ ಸಂಘಟನೆಗಳಲ್ಲೇ ಒಡಕು ಮೂಡಿದೆ. ಕರ್ನಾಟಕ್ ಬಂದ್ ಗೆ ವಾಟಳ್ ನಾಗರಾಜ್ ಬಂದ್ ಕರೆ ಹಿನ್ನೆಲೆ, ಕನ್ನಡ ಚಳವಳಿ ಪಕ್ಷದ ಅಧ್ಯಕ್ಷ ನಾಗೇಶ್ ವಿರೋಧ ವ್ಯಕ್ತಪಡಿಸಿದ್ದಾರೆ. ಮಹದಾಯಿ ಹೋರಾಟಕ್ಕೆ ಒಕ್ಕೂಟದಿಂದ ಬೆಂಬಲ ಇದೆ, ಆದರೆ ಬಂದ್ ಗೆ ನಮ್ಮ ವಿರೋಧ ಇದೆ ಎಂದಿದ್ದಾರೆ. ನಾಳಿನ ಬಂದ್ ವಿರೋಧಿಸಿ ನಗರದ ಟೌನ್ ಹಾಲ್ ವೃತ್ತದಲ್ಲಿ, ಕನ್ನಡ ಚಳವಳಿ ಸಂಘಟನೆಯ ಅಧ್ಯಕ್ಷ ನಾಗೇಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದು, ಯಾರು ಬಂದ್ ಮಾಡಬೇಡಿ ನಾವಿದ್ದೇವೆ ಎಂದು ಹೇಳಿದ್ದಾರೆ.

ಟೌನ್ ಹಾಲ್ ನಿಂದ ಕೆಜಿ ರೋಡು, ಮಾರುಕಟ್ಟೆ, ಮೆಜೆಸ್ಟಿಕ್ ಸುತ್ತ ಮೆರವಣಿಗೆ ಮೂಲಕ ಬಂದ್ ಮಾಡಬೇಡಿ ಎಂದು ಮನವಿ ಮಡಿದ್ದಾರೆ. ಜನರಿಗೆ ಗುಲಾಬಿ ಹೂವು ನೀಡಿ ಬಂದ್ ಮಾಡಬೇಡಿ ಎಂದು ವಿನಂತಿಸಿಕೊಂಡಿದ್ದಾರೆ. 'ಹೋರಾಟಕ್ಕೆ ನಮ್ಮ ಬೆಂಬಲ ಬಂದ್ ಗೆ ಬೆಂಬಲ ಇಲ್ಲ' ಎಂಬ ಘೋಷಣೆಯೊಂದಿಗೆ ಪ್ರತಿಭಟನೆ ನಡೆಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

karnataka Bandh kannada organisation ವಿರೋಧ ಮೆರವಣಿಗೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ