ಶ್ರವಣಬೆಳಗೊಳದಲ್ಲಿ ಬಿಜೆಪಿಗೆ ಟಾಂಗ್ ನೀಡಿದ ಸಿ.ಎಂ.ಸಿದ್ದರಾಮಯ್ಯ

Kannada News

24-04-2017

ಬೆಂಗಳೂರಿನಿಂದ ಶ್ರವಣಬೆಳಗೊಳಕ್ಕೆ ಬರುವಾಗ ಹೆಲಿಕಾಪ್ಟರ್ ಗೆ ಯಾವುದೋ ಪಕ್ಷಿ ಢಿಕ್ಕಿ ಹೊಡೆದಿದ್ದು ನಿಜ.ಆ ಕಾರಣದಿಂದ ವಾಪಸ್ ತಿರುಗಿ ಮತ್ತೆ ವಾಪಸ್‌ ಬಂದ್ವಿ. ಶ್ರವಣಬೆಳಗೊಳದಲ್ಲಿ ಸಿ.ಎಂ.ಸಿದ್ದರಾಮಯ್ಯ ಹೇಳಿಕೆ.
 ಪೊಲೀಸ್ ಸಿಬ್ಬಂದಿ ನೇಮಕಾತಿ ಪ್ರತಿವರ್ಷವೂ ನಡೆಯುತ್ತಿದೆ‌ ಗುಪ್ತಚರ ಇಲಾಖೆಗೊ ವಿಶೇಷ ನೇಮಕಾತಿ ಆಗ್ತಾ ಇದೆ.ಉಪಚುನಾವಣೆಯಲ್ಲಿ ಹಣ ಬಲದಿಂದ ಗೆದ್ದಿಲ್ಲ.ಕಾಂಗ್ರೆಸ್‌ ಗೆ ಮತದಾರರು ಆಶೀರ್ವಾದ ಮಾಡಿದ್ದರಿಂದ ಗೆದ್ದಿದ್ದೇವೆ. ಮುಂದಿನ ಚುನಾವಣೆಯ ದಿಕ್ಸೂಚಿ ಅಲ್ಲ ಅಂಥ ನಾನು ಹೇಳಿದ್ದೆ. ಆದ್ರೆ ಯಡಿಯೂರಪ್ಪ, ಬಿಜೆಪಿ ಯವರು ಮಾತ್ರ ದಿಕ್ಸೂಚಿ ಎಂದು ಹೇಳಿದ್ರು, ಆದ್ರೆ ಸೋತ ನಂತರ ಸಲ್ಲದ ಆರೋಪ ಮಾಡ್ತಾರೆ ಎಂದು ಬಿಜೆಪಿ ಗೆ ಟಾಂಗ್ ನೀಡಿದರು.
ಸಾಲ ಮನ್ನಾ ಇಲ್ಲ. ಕೇಂದ್ರ ಮಾಡಿದ್ರೆ ರಾಜ್ಯ ಸರ್ಕಾರ ಮಾಡುತ್ತೆ. ಕೆ.ಪಿ.ಸಿ.ಸಿ ಅಧ್ಯಕ್ಷ ರ ಬದಲಾವಣೆ ವಿಚಾರ ನನಗೆ ಸಂಬಂಧಿಸಿದ್ದಲ್ಲ. ಹೈಕಮಾಂಡ್ಗೆ ಬಿಟ್ಟಿದ್ದು. ಎರಡು ಮಂತ್ರಿ ಸ್ಥಾನ ಖಾಲಿ ಇದೆ. ವರಿಷ್ಠ ರೊಂದಿಗೆ ಚರ್ಚಿಸಿ ವಿಸ್ತರಣೆ ಮಾಡುತ್ತೇನೆ. ಎತ್ತಿನ ಹೊಳೆ ಯೋಜನೆ ಕಾಮಗಾರಿ ವೇಗವಾಗಿ ನಡೆಯುತ್ತಿದೆ ಎಂದರು ಸಿ.ಎಂ. ಇದೇ ವೇಳೆ ವೇದಿಕೆ ಕಾರ್ಯ ಕ್ರಮದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ,ಜಿ.ಪರಮೇಶ್ವರ್,ಎ.ಮಂಜು,ರುದ್ರಪ್ಪಲಮಾಣಿ ಉಪಸ್ಥಿತರಿದ್ದರು.

Links :ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ