‘ಬಂದ್ ಗೆ ಸಿಎಂ ಕುಮ್ಮಕ್ಕು’- ಬಿಎಸ್ ವೈ

karnataka Bandh: Yeddyurappa blame on siddaramaiah

24-01-2018

ಮಡಿಕೇರಿ: ಬಿಜೆಪಿಯ ಪರಿವರ್ತನಾ ಯಾತ್ರೆ ವಿಫಲಗೊಳಿಸಲು ಯತ್ನ ನಡಯುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಮಡಿಕೇರಿಯಲ್ಲಿಂದು ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರು ಬಂದ್ ಗೆ ಕುಮ್ಮಕ್ಕು ನೀಡಿತ್ತಿದ್ದಾರೆ, ಅಲ್ಲದೇ ಫೆಬ್ರವರಿ 4 ರಂದು ಪ್ರಧಾನಿ ಮೋದಿ ರಾಜ್ಯ ಪ್ರವಾಸವಿದೆ, ಅಂದು ಕೂಡಾ ಬಂದ್ ಗೆ ಕುಮ್ಮಕ್ಕು ನೀಡಲಾಗುತ್ತಿದೆ, ಇದೆಲ್ಲಾ ಸಿಎಂ ಸಿದ್ದರಾಮಯ್ಯ ಅವರ ಕುತಂತ್ರ ಎಂದು ದೂರಿದ್ದಾರೆ.

ಇನ್ನು ಮಹದಾಯಿ ವಿವಾದ ಬಗೆಹರಿಸಲು ಬಿಜೆಪಿ ಬದ್ಧವಾಗಿದೆ. ರೈತರಿಗೆ, ಕನ್ನಡ ಪರ ಹೋರಾಟಗಾರರಿಗೆ ಕಾಂಗ್ರೆಸ್ ಕುಮ್ಮಕ್ಕು ನೀಡುತ್ತಿದೆ ಎಂದು ಆರೋಪಿಸಿದರು. ಅದಲ್ಲೇ ಮಹದಾಯಿ ವಿಚಾರದಲ್ಲಿ ರಾಹುಲ್ ಗಾಂಧಿ ನಿಲುವೇನು, ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ನಿಲುವೇನು? ಎಂದು ಬಿಎಸ್ ವೈ ಪ್ರಶ್ನಿಸಿದ್ದಾರೆ.

ರಾಹುಲ್ ಗಾಂಧಿ ಭೇಟಿ ನೀಡುವ ಜಿಲ್ಲೆಗಳಲ್ಲಿ ಬಂದ್ ಗೆ ಕರೆ ನೀಡುತ್ತೇವೆ, ಮಹದಾಯಿ ವಿಚಾರದಲ್ಲಿ ರಾಹುಲ್ ಸ್ಪಷ್ಟೀಕರಣ ನೀಡಬೇಕು ಎಂದವರು ಆಗ್ರಹಿಸಿದ್ದಾರೆ. ಅಮಿತ್ ಷಾ ಬಂದಾಗ ಬಂದ್ ಮಾಡುವುದಾದರೆ ರಾಹುಲ್ ಗಾಂಧಿ ಬಂದಾಗಲೂ ಬಂದ್ ಮಾಡುತ್ತೇವೆ ಎಂದರು. ಮಹಾರಾಷ್ಟ್ರ, ಗೋವಾ ಮುಖ್ಯಮಂತ್ರಿಗಳನ್ನು ಒಪ್ಪಿಸುವ ಜವಾಬ್ದಾರಿ ನಾವು ತೆಗೆದುಕೊಳ್ಳುತ್ತೇವೆ, ಪ್ರತಿಪಕ್ಷವನ್ನು ಒಪ್ಪಿಸುವ ಕೆಲಸವನ್ನು ಕಾಂಗ್ರೆಸ್ ಮಾಡಲಿ ಎಂದರು ಯಡಿಯೂರಪ್ಪ.


ಸಂಬಂಧಿತ ಟ್ಯಾಗ್ಗಳು

Yeddyurappa Mahadayi ರಾಹುಲ್ ಗಾಂಧಿ ಪ್ರತಿಪಕ್ಷ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ