‘ಯಡಿಯೂರಪ್ಪಗೆ ಕಾನೂನು ಗೊತ್ತಿಲ್ಲ’24-01-2018

ಮೈಸೂರು: ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ವರ್ಗಾವಣೆ ಕುರಿತಂತೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ಅದೊಂದು ಆಡಳಿತಾತ್ಮಕ ವಿಚಾರ, ಅದಕ್ಕೆ ರಾಜಕಾರಣ ಬೆರೆಸಬಾರದು ಎಂದು ಹೇಳಿದ್ದಾರೆ. ಮೈಸೂರಿನಲ್ಲಿಂದು ಮಾತನಾಡಿದ ಅವರು, ವರ್ಗಾವಣೆ ವಿಚಾರದಲ್ಲಿ ಬಿ.ಶಿವರಾಂ ನನ್ನ ಜೊತೆ ಈ ತನಕ ಮಾತನಾಡಿಲ್ಲ, ಸ್ಥಳೀಯ‌ ವಿದ್ಯಮಾನಗಳಿಗೆ ಏಕೆ ಮಹತ್ವ ಕೊಡುತ್ತೀರಿ ಎಂದು, ಮಾಧ್ಯಮದವರನ್ನೇ ಸಿಎಂ ಪ್ರಶ್ನಿಸಿದರು.

ಇನ್ನು ರೋಹಿಣಿ ವರ್ಗಾವಣೆ ವಿಚಾರದಲ್ಲಿ ದೇವೇಗೌಡರ ಅಸಮಾಧಾನದ ಕುರಿತು, ಅವರು ಯಜಮಾನರು ಅವರನ್ನು ಬಿಟ್ಟು ಬಿಡಿ, ಅವರನ್ನು ಯಾಕೆ ಎಳೆದು ತರುತ್ತೀರಿ ಎಂದಿದ್ದು, ದೇವೆಗೌಡರ ಹೇಳಿಕೆ ಬಗ್ಗೆ ನಾನು ಟೀಕೆ ಮಾಡಲ್ಲ‌. ಅವರು ಏನು ಬೇಕಾದ್ರೂ ಮಾತನಾಡಿಕೊಳ್ಳಲಿ, ನಾನು ಯಾವುದೇ ಪ್ರತಿಕ್ರಿಯೆ ನೀಡಲ್ಲ ಎಂದರು. ವೇದಿಕೆ ಹಂಚಿಕೊಳ್ಳೋ ವಿಚಾರ, ಅದು ಅವರಿಗೆ ಬಿಟ್ಟ ವಿಷಯ ಎಂದರು.

ಅದಲ್ಲದೇ ಶೇ 60ರಷ್ಟು ಕೇಂದ್ರ ಅನುದಾನ ಸದ್ಬಳಕೆ ಆಗಿಲ್ಲವೆಂದು ಯಡಿಯೂರಪ್ಪ ಆರೋಪಿಸಿದ್ದಾರೆ, ಕೇಂದ್ರದಲ್ಲಿ ಯಾವುದೇ ಸರ್ಕಾರ ಇದ್ದರೂ ಹಣಕಾಸು ಆಯೋಗದ ಶಿಫಾರಸ್ಸಿನಂತೆ ಅನುದಾನ ಹಂಚಿಕೆ ಮಾಡಲೇಬೇಕು. ಬಿಜೆಪಿಯವರಿಗೆ ಹಣಕಾಸು ವಿಚಾರದಲ್ಲಿ ಸಾಮಾನ್ಯ ಜ್ಞಾನ ಇಲ್ಲ, ಇವರಿಗೆ ಬರೀ ಸುಳ್ಳು ಹೇಳುವುದೇ ಹವ್ಯಾಸ ಎಂದು ಲೇವಡಿ ಮಾಡಿದ್ದಾರೆ.

ಜನರ ದಿಕ್ಕು ತಪ್ಪಿಸಲು ಏನೇನೋ ಹೇಳಬಾರದು ವೇದಿಕೆಗಳಲ್ಲಿ ಸುಮ್ಮನೆ‌ ಪುಂಗಿ ಊದುತ್ತಾ ಇದ್ದಾರೆ, ಕೇಂದ್ರ ಸರ್ಕಾರದ ಅನುದಾನ ಯಡಿಯೂರಪ್ಪ ಮನೆದಾ? ನಮಗೆ ಭಿಕ್ಷೆ ಕೊಡುವ ತರಾ ಅಮಿತ್ ಷಾ, ಯಡಿಯೂರಪ್ಪ ನಾವು ಕೇಂದ್ರದಿಂದ ಹಣ ಕೊಟ್ಟಿದ್ದೇವೆ ಎಂದು ಹೇಳುತ್ತಾರೆ. ಅವರಿಗೆ ಸಂವಿಧಾನ, ಕಾನೂನು ಗೊತ್ತಿಲ್ಲ‌. ಸುಮ್ಮನೆ ಜನರಿಗೆ ತಪ್ಪು ಮಾಹಿತಿ ನೀಡಬಾರದು, ಯಡಿಯೂರಪ್ಪಗೆ ಈ ರೀತಿ ಮಾತನಾಡಲು ನಾಚಿಕೆಯಾಗಬೇಕು, ಅವರು ಸಹ ಮುಖ್ಯಮಂತ್ರಿಯಾಗಿದ್ದವರು, ಸ್ವಲ್ಪ ಕಾನೂನು ತಿಳಿದುಕೊಳ್ಳಬೇಕು. ರಾಜ್ಯದ ಜನ‌‌ ಜನ ನಮಗಿಂತ ಬುದ್ಧಿವಂತರು, ಇವರು ಏನೇ ಸುಳ್ಳು ಹೇಳಿದರೂ ನಂಬಲ್ಲ ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ