‘ದಲಿತ’ ಎಂಬ ಪದ ಬಳಕೆ ಬೇಡ

Don’t use ‘Dalit’ in official communication

24-01-2018

ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಯಾವುದೇ ರೀತಿಯ ಅಧಿಕೃತ ಪತ್ರಗಳಲ್ಲಿ ದಲಿತ ಎಂಬ ಪದದ ಬಳಕೆ ಮಾಡಬಾರದು ಎಂದು ಮಧ್ಯಪ್ರದೇಶ ಹೈಕೋರ್ಟ್ ಸೂಚನೆ ನೀಡಿದೆ. ಭಾರತದ ಸಂವಿಧಾನದಲ್ಲಿ ಎಲ್ಲಿಯೂ ದಲಿತ ಎಂಬ ಪದದ ಉಲ್ಲೇಖ ಇಲ್ಲ. ದಲಿತ ಎಂಬ ಪದದ ಬದಲು ಪರಿಶಿಷ್ಟ ಜಾತಿ ಅಥವ ವರ್ಗ ಎಂಬುದನ್ನು ಮಾತ್ರ ಬಳಸಬೇಕು ಎಂದು ಮಧ್ಯಪ್ರದೇಶ ಹೈಕೋರ್ಟಿನ ಗ್ವಾಲಿಯರ್ ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.

ಸಾಮಾಜಿಕ ಕಾರ್ಯಕರ್ತ ಮೋಹನ್ ಲಾಲ್ ಮೊಹರ್ ಎಂಬುವವರು ಸರ್ಕಾರದ ಅಧಿಕೃತ ಅಥವ ಅನಧಿಕೃತ ಪತ್ರ ಮತ್ತು ದಾಖಲೆಗಳಲ್ಲಿ ದಲಿತ ಎಂಬ ಪದದ ಬಳಕೆ ವಿರುದ್ಧ ಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಿದ್ದರು. ದಲಿತ ಎಂಬುದು ಅವಹೇಳನಕಾರಿ ಪದವಾಗಿದ್ದು, ಅದನ್ನು ಪರಿಶಿಷ್ಚ ಜಾತಿ ಮತ್ತು ವರ್ಗದ ಜನರನ್ನು ಹೀಗಳೆಯಲು  ಬಳಸಿಕೊಳ್ಳಲಾಗುತ್ತಿದೆ ಎನ್ನುವುದು ಅವರ ವಾದವಾಗಿತ್ತು. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರೂ ಕೂಡ ದಲಿತ ಅನ್ನುವ ಪದ ಬಳಕೆ ಸೂಕ್ತವಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು ಅನ್ನುವುದು ಮೋಹನ್ ಲಾಲ್ ಅವರ ಮಾತು.

150ಕ್ಕೂ ಹೆಚ್ಚು ವರ್ಷಗಳ ಹಿಂದೆ ಮಹಾರಾಷ್ಟ್ರದ ಸಮಾಜ ಸುಧಾರಕ ಜ್ಯೋತಿಬಾ ಫುಲೆ ಅವರು ಮೊದಲ ಬಾರಿಗೆ ದಲಿತರು ಎಂಬ ಪದ ಪ್ರಯೋಗ ಮಾಡಿದ್ದರು. ದಲಿತ ಎಂಬ ಪದದ ಅಡಿಯಲ್ಲಿ ಹಲವು ಜಾತಿಗಳವರು ಒಗ್ಗಟ್ಟು ಕಂಡುಕೊಂಡಿದ್ದರು.


ಸಂಬಂಧಿತ ಟ್ಯಾಗ್ಗಳು

Dalith Constitution ಜ್ಯೋತಿಬಾ ಫುಲೆ ಹೈಕೋರ್ಟ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ