ನಗರ ಪೊಲೀಸ್ ಆಯುಕ್ತರಿಗೆ ನೋಟಿಸ್

high court notice to bengaluru city commissioner

23-01-2018

ಬೆಂಗಳೂರು: ನಗರ ಪೊಲೀಸ್ ಆಯುಕ್ತ ಟಿ‌.ಸುನಿಲ್ ಕುಮಾರ್‌ ಹಾಗು, ಪೂರ್ವ ವಿಭಾಗದ ಡಿಸಿಪಿ ರಾಮಮೂರ್ತಿ ನಗರದ ಇನ್ಸ್‌ ಪೆಕ್ಟರ್ಗೂ ಹೈಕೋರ್ಟ್ ಏಕಸದಸ್ಯ ಪೀಠದಿಂದ ನೋಟಿಸ್ ನೀಡಲಾಗಿದೆ. ಅಕ್ರಮ ಜಾನುವಾರು ಸಾಗಾಣಿಕೆಗೆದಾರ ವಿರುದ್ಧ ಎಫ್.ಐ.ಆರ್ ದಾಖಲಿಸದ ಹಿನ್ನೆಲೆ ನೋಟಿಸ್ ನೀಡಲಾಗಿದೆ.

ಜನವರಿ 19ರಂದು 16 ಜಾನುವಾರುಗಳನ್ನು ಅಕ್ರಮವಾಗಿ ಸಾಗಾಣಿಕೆ ‌ಮಾಡುತ್ತಿದ್ದು, ಅವುಗಳನ್ನು ರಕ್ಷಿಸಲಾಗಿದೆ, ಆದರೆ ಪೊಲೀಸರು ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸದೆ, ಎನ್.ಸಿ.ಆರ್ ಮಾಡಿದ್ದಾರೆ. ಪೊಲೀಸರಿಗೆ ದೂರು ನೀಡಿದ್ದರೂ ಎಫ್ಐಆರ್ ದಾಖಲಿಸಿಲ್ಲ ಎಂದು ಆರೋಪಿಸಿ, ಪೊಲೀಸರ ಕ್ರ‌ಮ ಪ್ರಶ್ನಿಸಿ ಜೋಶ್ನಿ ಆಂಟೋನಿ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ತಮ್ಮ ಅರ್ಜಿಯಲ್ಲಿ ರಕ್ಷಣೆ ಮಾಡಿರುವ ಜಾನುವಾರುಗಳನ್ನು ಶ್ರೀಕೃಷ್ಣ ಗೋಶಾಲೆಯಲ್ಲಿ ರಕ್ಷಣೆ ಮಾಡಲಾಗಿದ್ದು, ಗೋಶಾಲೆಯಲ್ಲಿರುವ ಜಾನುವಾರು ಬಿಡುಗಡೆ ಮಾಡದಂತೆ ಮಧ್ಯಂತರ ಆದೇಶ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದರು. ಇದನ್ನು ಮಾನ್ಯ ಮಾಡಿದ ಹೈಕೋರ್ಟ್ ಏಕಸದಸ್ಯ ಪೀಠ, ಅರ್ಜಿ ವಿಚಾರಣೆ ನಡೆಸಿ ಈ ಕುರಿತು ವಿವರಣೆ ನೀಡುವಂತೆ ನಗರ ಪೊಲೀಸ್ ಆಯುಕ್ತ ಟಿ‌.ಸುನಿಲ್ ಕುಮಾರ್‌ ಹಾಗು, ಪೂರ್ವ ವಿಭಾಗದ ಡಿಸಿಪಿ, ರಾಮಮೂರ್ತಿ ನಗರದ ಇನ್ಸ್‌ ಪೆಕ್ಟರ್ ಗೆ ನೋಟಿಸ್ ಜಾರಿ ಮಾಡಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ