ಸಾಲಕ್ಕೆ ಹೆದರಿ ರೈತ ಆತ್ಮಹತ್ಯೆ

Kannada News

24-04-2017

ಮಂಡ್ಯ:- ಮಂಡ್ಯ ಜಿಲ್ಲೆ, ಪಾಂಡವಪುರ ತಾಲ್ಲೂಕು, ಚಿನಕುರಳಿ ಗ್ರಾಮದಲ್ಲಿ  ರಾಮಕೃಷ್ಣೇಗೌಡ(೫೫) ಬಿನ್ ಪಾಪೇಗೌಡ ಆತ್ಮಹತ್ಯೆಗೆ ಶರಣಾಗಿದ್ದು ಪತ್ನಿ, ಮಗ ಹಾಗೂ ಮಗಳನ್ನು ಅಗಲಿದ್ದಾರೆ. 3.20 ಎಕರೆ ಜಮೀನಿನಲ್ಲಿ ಕಬ್ಬು ಬೆಳೆದು ನಷ್ಟ ಅನುಭವಿಸಿದ್ದರು. ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಚಿನಕುರಳಿ ಶಾಖೆಯಲ್ಲಿ ಸಾಲ ಮಾಡಿಕೊಂಡಿದ್ದರು.  ಇತ್ತೀಚೆಗೆ ತನ್ನ ಬೆಳೆಯನ್ನು ಉಳಿಸಿಕೊಳ್ಳಲು ಜಮೀನಿನಲ್ಲಿ 3 ಕೊಳವೆ ಬಾವಿ ತೆಗೆಸಿದ್ದರು, ಆದರೆ ಮೂರೂ ಕೊಳವೆ ಬಾವಿಗಳು ಕೈ ಕೊಟ್ಟಿದ್ದರಿಂದ ಕಂಗಾಲಾಗಿದ್ದ ರೈತ  ಗ್ರಾಮದ ಜನರಿಂದ ೩ ಲಕ್ಷಕ್ಕೂ ಅಧಿಕ ಕೈ ಸಾಲ ಮಾಡಿಕೊಂಡಿದ್ದರು. ಇದರ ಜೊತೆ ತನ್ನ ಹೆಂಡತಿ ಬಳಿ ಇದ್ದ ಒಡವೆಗಳನ್ನು ವಿಶ್ವೇಶ್ವರಯ್ಯ ಗ್ರಾಮೀಣ ಬ್ಯಾಂಕ್ ನಲ್ಲಿ ಅಡವಿಟ್ಟು ಆ ಹಣವನ್ನೂ ಕೂಡ ವ್ಯವಸಾಯಕ್ಕೆ ತೊಡಗಿಸಿದ್ದರು. ಇತ್ತ ಬೆಳೆ ಒಣಗುತ್ತಿದ್ದು, ಬ್ಯಾಂಕ್ ಹಾಗೂ ಜನರಿಗೆ ಸಾಲ ಹಿಂತಿರುಗಿಸಲಾಗದೆ, ೨೩ ರ ಸಂಜೆ ಮನೆಯಲ್ಲಿ ಯಾರೂ ಇಲ್ಲದೆ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತನ ಆತ್ಮಹತ್ಯೆಗೆ ಬೆಳೆ ನಷ್ಟ ಹಾಗೂ ಸಾಲವೇ ಕಾರಣವಾಗಿದ್ದು, ಸೂಕ್ತ ಪರಿಹಾರಕ್ಕಾಗಿ ಆತನ ಮನೆಯವರು ಒತ್ತಾಯಿಸಿದ್ದಾರೆ.

Links :ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ