ತೀರ್ಪು ಅಸಮಾಧಾನ: ವ್ಯಕ್ತಿ ಆತ್ಮಹತ್ಯೆಗೆ ಯತ್ನ

A man attempt to suicide in court premises:Bangaluru

23-01-2018

ಬೆಂಗಳೂರು: ಕೋರ್ಟ್ ತೀರ್ಪಿನಿಂದ ಅಸಮಾಧಾನಗೊಂಡ ವ್ಯಕ್ತಿಯೊಬ್ಬ ಕೋರ್ಟ್ ಆವರಣದಲ್ಲೇ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಗರದಲ್ಲಿ ನಡೆದಿದೆ. ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್ ಬಳಿ ಈ ರೀತಿಯ ಹುಚ್ಚಾಟ ನಡೆಸಿದ ವ್ಯಕ್ತಿ ಪದ್ಮನಾಭ ಎಂದು ಗುರುತಿಸಲಾಗಿದೆ. ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಪದ್ಮನಾಭ ರಾಜಾಜಿನಗರದ ಪ್ರಕಾಶ್ ನಗರದ ನಿವಾಸಿ ಎಂದು ತಿಳಿದು ಬಂದಿದೆ.

ಪದ್ಮನಾಭ ಅವರು, ನಾರಾಯಣ್ ರಾವ್ ಎಂಬಾತನ‌ ಬಳಿ 60 ಸಾವಿರ ಸಾಲ ‌ಪಡೆದಿರುವುದಾಗಿಯೂ, ಆದರೆ ನಾರಾಯಣ್ 4ಲಕ್ಷ ಹಣ ಕೊಟ್ಟಿದ್ದೇನೆ ಎಂದು ಕೋರ್ಟ್ ಮೋರೆ ಹೋಗಿದ್ದು, ವಿಚಾರಣೆ ನಡೆಸಿದ ಕೋರ್ಟ್ ಕೊನೆಗೆ 4.5 ಲಕ್ಷ ಹಣವನ್ನು ಕೊಡುವಂತೆ ನಿನ್ನೆ ತೀರ್ಪು ನೀಡಿತ್ತು. ಕೋರ್ಟ್ ತೀರ್ಪಿನಿಂದ ಬೇಸರಗೊಂಡ ಪದ್ಮನಾಭ ಆತ್ಮಹತ್ಯೆಗೆ ಯತ್ನಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

court suicide ಆತ್ಮಹತ್ಯೆ ತೀರ್ಪು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ