ನಿಮಲ್ಲಿ ಒಳ್ಳೆ ಕ್ಯಾಟಿಟ್ಯೂಡ್ ಇದೆಯೇ?

Job in Ireland for Professional Cat Cuddler

23-01-2018

ನಿಮಗೆ ಬೆಕ್ಕುಗಳನ್ನು ಕಂಡ್ರೆ ಬಲೇ ಇಷ್ಟಾನಾ? ನಿಮಗೆ ಒಳ್ಳೆಯ ಆಟಿಟ್ಯೂಡ್ ಅಲ್ಲಲ್ಲ ಕ್ಯಾಟಿಟ್ಯೂಡ್ ಇದೆಯಾ? ನೀವು ಚಿಕ್ಕವರಿದ್ದಾಗ, ಮನೆ ಹಿತ್ತಲಿನಲ್ಲಿ ಬೆಕ್ಕು ಹಾಕಿದ ಮರಿಗಳೆಲ್ಲ ಇವೆಯೇ ಎಂದು ಎಣಿಸಿ, ಸಮಾಧಾನಪಟ್ಟುಕೊಂಡು ನಂತರವೇ ನಿದ್ದೆ ಮಾಡಲು ಹೋಗುತ್ತಿದ್ದಿರಾ? ನೀವೇನಾದ್ರೂ ನಿಮ್ಮ ಮನೆ ಅಕ್ಕಪಕ್ಕ ಕಾಣಿಸಿಕೊಳ್ಳೋ ಬೀದಿ ಬೆಕ್ಕುಗಳಿಗೆ ಹಾಲು ಹಾಕ್ತೀರಾ? ಆಗೋಯ್ತು, ಇನ್ನೊಂದೇ ಪ್ರಶ್ನೆ, ಬೆಕ್ಕುಗಳನ್ನು ಮುದ್ದು ಮಾಡೋದು ಅವುಗಳ ಜೊತೆ ಆಟ ಆಡೋದು ನಿಮಗೆ ನಿಮಗೆ ತುಂಬಾ ಖುಷಿ ಕೊಡುತ್ತಾ?  ಈ ಎಲ್ಲಾ ಪ್ರಶ್ನೆಗಳಿಗೆ ನಿಮ್ಮ ಉತ್ತರ ಹೌದು ಅನ್ನೋದಾಗಿದ್ರೆ ಸರಿ, ಹಾಕಿ ಅಪ್ಲಿಕೇಷನ್ನು, ಎಲ್ಲಿಗೆ ಅಂತೀರಾ? ಐರ್ಲೆಂಡ್ ದೇಶದ ರಾಜಧಾನಿ ಡಬ್ಲಿನ್ ನಲ್ಲಿರೋ ಜಸ್ಟ್ ಕ್ಯಾಟ್ಸ್ ಅನ್ನೋ ವೆಟೆರ್‌ನರಿ ಕ್ಲಿನಿಕ್ ನವರು, ಕ್ಯಾಟ್‌ಕಡ್ಲರ್‌ಗಳು ಅಂದರೆ ಬೆಕ್ಕುಗಳನ್ನು ಮುದ್ದಿಸುವವರನ್ನು ನೇಮಿಸಿಕೊಳ್ಳೋದಕ್ಕೆ ಅರ್ಜಿ ಆಹ್ವಾನಿಸಿದ್ದಾರೆ. ಈ ಬೆಕ್ಕು ಮುದ್ದುಗಾರರು, ತುಂಬಾ ಮೃದುವಾದ ಕೈಗಳನ್ನು ಹೊಂದಿರಬೇಕು, ಗಂಟೆಗಟ್ಟಲೆ ಬೆಕ್ಕುಗಳನ್ನು ಮುದ್ದು ಮಾಡೋ ಸಾಮರ್ಥ್ಯ ಹೊಂದಿರಬೇಕು ಮತ್ತು ಅವುಗಳು ಯಾವ ರೀತಿ ಸದ್ದು ಮಾಡಿದ್ರೆ ಅದರ ಅರ್ಥ ಏನು ಅನ್ನೋದು ಗೊತ್ತಿದ್ರೆ ತುಂಬಾ ಒಳ್ಳೆಯದು ಎಂದು ಅವರ ಪ್ರಕಟಣೆ ಹೇಳುತ್ತದೆ. ಆದರೆ,  ಇದು, ಫುಲ್ ಟೈಮ್ ಜಾಬ್ ಆಗಿರುವುದರಿಂದ ನೀವು ಈಗ ಮಾಡುತ್ತಿರುವ ಕೆಲಸವನ್ನು ಬಿಟ್ಟು ಅಲ್ಲಿಗೆ ಹೋಗಬೇಕಾಗುತ್ತದೆ.


ಸಂಬಂಧಿತ ಟ್ಯಾಗ್ಗಳು

Cuddler Ireland ಆಟಿಟ್ಯೂಡ್ ಕ್ಯಾಟಿಟ್ಯೂಡ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ