'ಅನಂತಕುಮಾರ್ ಹೆಗಡೆ ಹುಚ್ಚು ನಾಯಿ'- ಪುಟ್ಟಣ್ಣಯ್ಯ23-01-2018

ಮಂಡ್ಯ: ಸಂವಿಧಾನ ವಿರೋಧಿ ಹೇಳಿಕೆ ನೀಡಿ ತೀವ್ರ ವಿವಾದಕ್ಕೀಡಾಗಿ, ಇದರಿಂದ ರಾಜ್ಯದೆಲ್ಲೆಡೆ ಪ್ರತಿಭಟನೆಗಳ ಕಾವು ಹೆಚ್ಚಾಗಿ ಕೊನೆಗೆ ಕ್ಷಮಾಪಣೆಯನ್ನೂ ಕೇಳಿ, ಇನ್ನೇನು ಎಲ್ಲ ಮುಗಿಯಿತು ಎನ್ನುವಷ್ಟರಲ್ಲಿ ಮತ್ತೊಂದು ಭಾರೀ ವಿವಾದದ ಹೇಳಿಕೆ ನೀಡಿದ ಅನಂತಕುಮಾರ್ ಹೆಗಡೆ ದಲಿತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ದಲಿತರನ್ನು ನಾಯಿಗಳಿಗೆ ಹೋಲಿಸುವ ಹೇಳಿಕೆಗೆ ಎಲ್ಲೆಡೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದು, ಈ ಕುರಿತಂತೆ ಪ್ರತಿಕ್ರಿಯಿಸಿದ ಶಾಸಕ‌ ಪುಟ್ಟಣ್ಣಯ್ಯ, ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಹುಚ್ಚು ನಾಯಿ, ದಲಿತರು, ಹಿಂದುಳಿದ ವರ್ಗದವರು ನಿಯತ್ತಿನ ನಾಯಿಗಳು, ಅವನು ಹುಚ್ಚು ನಾಯಿ ಎಂದು ಏಕವಚನದಲ್ಲೇ ಕಿಡಿಕಾರಿದ್ದಾರೆ. ಅವರಿಗೆ ಮುಖವಾಡ ಹಾಕಬೇಕು, ದಲಿತರು ಈ ದೇಶದ ನಿಯತ್ತಿನ ನಾಯಿಗಳು, ಚಳುವಳಿಗಾರು ಈ ದೇಶ ಕಾಯೋ ನಿಯತ್ತಿನ ನಾಯಿಗಳು ಎಂದು ಅನಂತ್ ಕುಮಾರ್ ಹೇಳಿಕಗೆ ತಿರಗೇಟು ನೀಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

K.S.puttannaiah Anant Kumar Hegde ಸಂವಿಧಾನ ರಾಜಕೀಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ