ವಾಟಾಳ್ ವಿರುದ್ಧ ಬಿಜೆಪಿ ಮುಖಂಡನ ವಾಗ್ದಾಳಿ

BJP leader allegation on vatal nagaraj

23-01-2018

ಚಾಮರಾಜನಗರ: ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ವಿದೂಷಕ, ವಂಚಕ, ಎಂದು ಬಿಜೆಪಿ ಮುಖಂಡ ಮಲ್ಲೇಶ್ ಹೇಳಿದ್ದಾರೆ. ಚಾಮರಾಜನಗರದ ಬಿಜೆಪಿ ಮುಖಂಡರಾದ ಮಲ್ಲೇಶ್, ಚಾಮರಾಜನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿ, ವಾಟಾಳ್ ನಾಗರಾಜ್ ವಿರುದ್ಧ ಕೆಂಡಕಾರಿದ್ದಾರೆ.

ದುಡ್ಡು ವಸೂಲಿಗಾಗಿ ಕನ್ನಡ ಸಂಘಟನೆ ಕಟ್ಟಿದ್ದಾರೆ ಎಂದು ಗಂಭೀರ ಆರೋಪ ಮಾಡಿದ ಅವರು, ಚಾಮರಾಜನಗರ ಸಮಸ್ಯೆಗಳ ಬಗ್ಗೆ ಇವರು ಎಂದಿಗೂ ಧ್ವನಿ ಎತ್ತಿಲ್ಲ, ಸ್ಥಳೀಯ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತದವರು ಮಹಾದಾಯಿ ಬಗ್ಗೆ ಧ್ವನಿಎತ್ತಿ ಕನ್ನಡಿಗರನ್ನು ವಂಚಿಸುತ್ತಿದ್ದಾರೆ ಎಂದು ದೂರಿದರು. ಬಣ್ಣ ಬದಲಿಸೊ ಗೂಸಂಬೆ ಪಾತ್ರದಾರಿ ವಾಟಾಳ್ ನಾಗರಾಜ್, ಬಲಿತ ತಲೆಯಂತೆ ನಡೆದುಕೊಳ್ಳಲಿ ಎಂದರು. ಅಲ್ಲದೇ ವಾಟಾಳ್ ನಾಗರಾಜ್ ಸಿಎಂ ಸಿದ್ದರಾಮಯ್ಯ ಅವರ ಕೈಗೊಂಬೆ, ಸಿದ್ದರಾಮಯ್ಯ ಅವರ ಕಥೆಗೆ ವಾಟಾಳ್ ನಾಗರಾಜು ನಾಯಕ. ವಾಟಾಳ್ ನಾಗರಾಜು 25ರಂದು ಕರೆದಿರುವ ರಾಜ್ಯ ಬಂದ್ ಕಾಂಗ್ರೆಸ್‌ ಪ್ರಾಯೋಜಿತ ಬಂದ್ ಎಂದು ಆರೋಪಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

vatal nagaraj press meet ಕೈಗೊಂಬೆ ಪ್ರಾಯೋಜಿತ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ