ವಿಧವೆಗೆ ಯುವಕನಿಂದ ಮೋಸ..!

A widow Woman cheated by young man

23-01-2018

ಕೊಡಗು: ವಿಧವೆಯೊಬ್ಬರನ್ನು ಮದುವೆಯಾಗಿದ್ದ ಯುವಕನೊಬ್ಬ ಕೆಲಕಾಲ ಸಂಸಾರ ನಡೆಸಿ, ಇದೀಗ ನಾನು ಆಕೆಯನ್ನು ಮದುವೆಯೇ ಆಗಿಲ್ಲ ಎಂದು ಹೇಳಿ ಮಹಿಳೆಯನ್ನು ದೂರವಿಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಕೂಡ್ಲೂರಿನಲ್ಲಿ ಈ ಘಟನೆ ನಡೆದಿದೆ. ಕಡ್ಲೂರಿನ ನಿವಾಸಿಯಾ ವಿಧವಾ ಮಹಿಳೆಯನ್ನು ಮದುವೆಯಾಗಿದ್ದ ಅದೇ ತಲ್ಲೂಕಿನ ಯುವಕ, ಕೆಲಕಾಲ ಸಂಸಾರ ನಡೆಸಿದ್ದ. ಇದೀಗ ಮದುವೆಯೇ ಆಗಿಲ್ಲ ಎಂದು ತನ್ನ ವರಸೆ ಬದಲಿಸಿದ್ದು, ಇದರಿಂದ ಕೆರಳಿದ ಮಹಿಳೆ ಯುವಕನನ್ನು ಥಳಿಸಿದ್ದಾಳೆ. ಅದಲ್ಲದೇ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾಳೆ. ನನಗೆ ಸೂಕ್ತ ನ್ಯಾಯ ಒದಗಿಸುವಂತೆ ಆಗ್ರಹಿಸಿ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

ಇಷ್ಟಕ್ಕೆ ಸುಮ್ಮನಾಗದ  ಮಹಿಳೆ ಇಂದು ಮುಂಜಾನೆ ಯುವಕನ ಮನೆಗೆ ತೆರಳಿ ಪ್ರತಿಭಟನೆ ನಡೆಸಿದ್ದಾಳೆ. ಈ ವೇಳೆ ಯುವಕನ ಮನೆಯವರು ಹಾಗೂ ಮಹಿಳೆಯ ಕುಟುಂಬಸ್ಥರ ನಡುವೆ ಮಾತಿನ ಚಕಮಕಿ ನಡೆದಿದ್ದು, ಪರಸ್ಪರ ಬಡಿದಾಡಿಕೊಂಡಿದ್ದಾರೆ. ಘಟನೆಯಲ್ಲಿ ಮಹಿಳೆ ನೆಲಕ್ಕೆ ಬಿದ್ದ ಪರಿಣಾಮ ತೀವ್ರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿಲಾಗಿದೆ. ಸ್ಥಳಕ್ಕೆ ಕುಶಾಲನಗರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು ಮಾಹಿತಿ ಕಲೆಹಾಕುತ್ತಿದ್ದು ತನಿಖೆ ಕೈಗೊಂಡಿದ್ದಾರೆ. ಆದರೆ ಪೊಲೀಸರು ಯುವಕನ ಪರವಾಗಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

 


ಸಂಬಂಧಿತ ಟ್ಯಾಗ್ಗಳು

Widow harrasment ಸೋಮವಾರಪೇಟೆ ಮದುವೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ