ಬಿಜೆಪಿ ಶಾಸಕನ ವಿವಾದಾತ್ಮಕ ಹೇಳಿಕೆ

BJP MLA controversial statement

23-01-2018

ದಕ್ಷಿಣ ಕನ್ನಡ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿನ್ನೆ ನಡೆದ ಪರಿವರ್ತನಾ ಯಾತ್ರೆಯಲ್ಲಿ ಬಿಜೆಪಿ ಶಾಸಕ ಸುನೀಲ್ ಕುಮಾರ್ ಅವರ ವಿವಾದಾತ್ಮಕ ಹೇಳಿಕೆ, ಹಲವರ ಕೆಂಗಣ್ಣಿಗೆ ಗುರಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕದಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ಸುನೀಲ್ ಕುಮಾರ್ ಪಾಲ್ಗೊಂಡು, ಮುಂದಿನ‌ ಚುನಾವಣೆ ಬಂಟ್ವಾಳ ಕ್ಷೇತ್ರದಲ್ಲಿ ರಮನಾಥ್ ರೈ ಹಾಗೂ ರಾಜೇಶ್ ನಾಯ್ಕ್ ಉಳೆಪಾಡಿ ನಡುವಿನ ಸ್ಪರ್ಧೆ ಅಲ್ಲ, ಇದು ಅಲ್ಲಾಹು ಹಾಗೂ ರಾಮನ ನಡುವಿನ ಚುನಾವಣೆ ಎಂದು ಸಮಾವೇಶದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಯಾರು ಬೇಕು ನಮಗೆ ತೀರ್ಮಾನ ಆಗಬೇಕು, ಮತ್ತೆ ಮತ್ತೆ ಅಲ್ಲಾಹುನನ್ನ ಗೆಲ್ಲಿಸ್ತೀವಾ ಅಥವಾ ರಾಮನನ್ನು ಪ್ರೀತಿಸೋ ವ್ಯಕ್ತಿಯನ್ನು ಗೆಲ್ಲಿಸ್ತೀವಾ ಇದು ತೀರ್ಮಾನ ಆಗಬೇಕು ಎಂದೂ ಕೂಡ ಹೇಳಿದ್ದಾರೆ. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಸಚಿವ ರಮನಾಥ್ ರೈ ಅಲ್ಲಾಹುವಿನ ಕೃಪೆಯಿಂದ ನಾನು ಗೆದ್ದೆ ಎಂಬ ಹೇಳಿಕೆ ನೀಡಿದ್ದರು. ಈ ಹೇಳಿಕೆ ಉಲ್ಲೇಖಿಸಿ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಶಾಸಕ ಸುನೀಲ್ ಕುಮಾರ್ ಈ ರೀತಿಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ