ಪಾಲಿಕೆ ಸದಸ್ಯೆ ಮಹದೇವಮ್ಮ ನಿಧನ

BBMP corporator mahadevamma is no more

23-01-2018

ಬೆಂಗಳೂರು: ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯೆ ಮಹದೇವಮ್ಮ ನಾಗರಾಜ್(45) ಇಂದು ವಿಧಿವಶರಾಗಿದ್ದಾರೆ. ಬಿನ್ನಿಪೇಟೆ 121ನೇ ವಾರ್ಡ್ನ  ಕಾರ್ಪೊರೇಟರ್ ಆಗಿದ್ದ ಮಹದೇವಮ್ಮ ಕಾಂಗ್ರೆಸ್ ಪಕ್ಷದವರಾಗಿದ್ದಾರೆ. ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲೆಂದು ಹೋಗಿದ್ದ ಕಾರ್ಪೊರೇಟರ್ ಇಂದು ಮುಂಜಾನೆ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಇನ್ನು ಮಹದೇವಮ್ಮ ಅವರ ಮೃತ ದೇಹವನ್ನು ತಿರುಪತಿಯಿಂದ ಬೆಂಗಳೂರಿಗೆ ರವಾನಿಸಲಾಗುತ್ತಿದೆ. ಮಹದೇವಮ್ಮ ಅಗಲಿಕೆಯಿಂದ ಕುಟುಂಬಸ್ಥರಲ್ಲಿ ಶೋಕ ಮಡುಗಟ್ಟಿದೆ.


ಸಂಬಂಧಿತ ಟ್ಯಾಗ್ಗಳು

BBMP ward ಕಾರ್ಪೊರೇಟರ್ ಕಾಂಗ್ರೆಸ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ